ಹಾವೇರಿ: ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 185 ಕೆಜಿ ತೂಕದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೈದ್ಯರು ಜೀವ ಉಳಿಸಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸೋಮಲಾಪುರ ಗ್ರಾಮದ 48 ವರ್ಷದ ಚಂದ್ರಮ್ಮ ಎಂಬ ಮಹಿಳೆಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಚಂದ್ರಮ್ಮ ಬರೋಬ್ಬರಿ 185 ಕೆಜಿ ತೂಕವಿದ್ದು, ಹೊಟ್ಟೆಯಲ್ಲಿನ ಕರಳುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದ್ದವು. ದೇಹದ ತೂಕ ಅಧಿಕವಾಗಿದ್ದು ಒಂದೆಡೆಯಾದರೆ, ಕರುಳುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದ್ದವು. ಇದರಿಂದ ಆಗಾಗ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಚಂದ್ರಮ್ಮಳಿಗೆ ಕೆಲವು ದಿನಗಳಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಉಸಿರಾಟದ ಪ್ರಮಾಣ ಸಾಮಾನ್ಯವಾಗಿ 90 ರಿಂದ 92 ಇರಬೇಕಿತ್ತು. ಆದರೆ ಚಂದ್ರಮ್ಮಳ ಉಸಿರಾಟದ ಪ್ರಮಾಣ ಕೇವಲ 40 ಇತ್ತು. ಇದರಿಂದ ತಾಯಿ ಬದುಕುವುದೇ ಇಲ್ಲವೆಂದು ಚಂದ್ರಮ್ಮಳ ಪುತ್ರಿ ಚೈತ್ರಾ ಭಾವಿಸಿದ್ದಳು. ಇದನ್ನೂ ಓದಿ: ಆಡಳಿತದಲ್ಲಿ ಗುಜರಾತ್ ಮಾದರಿ, ಟಿಕೆಟ್ ಹಂಚಿಕೆಯಲ್ಲಿ ಪಕ್ಷ ನಿಷ್ಠೆ ಗೆಲುವಿಗೆ ಮಾನದಂಡವಾಗುತ್ತೆ: ಪ್ರಹ್ಲಾದ್ ಜೋಶಿ
Advertisement
Advertisement
ತಾಯಿಗೆ ತೀವ್ರ ಉಸಿರಾಟದ ಸಮಸ್ಯೆ ಆಗುತ್ತಿದ್ದಂತೆ ಆಕೆಯನ್ನು ಉಳಿಸಿಕೊಳ್ಳಲು ಮಗಳು ಚೈತ್ರಾ ಸಾಕಷ್ಟು ಆಸ್ಪತ್ರೆಗಳನ್ನು ಸುತ್ತಿದ್ದಾಳೆ. ಬಹುತೇಕ ಆಸ್ಪತ್ರೆಗಳಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿ ಮನೆಗೆ ಕಳಿಸಿದ್ದರು. ತೂಕದ ಪ್ರಮಾಣ ಸಾಕಷ್ಟು ಹೆಚ್ಚಿದ್ದರಿಂದ ವಿವಿಧ ಆಸ್ಪತ್ರೆಗಳಲ್ಲಿನ ವೈದ್ಯರು ರಿಸ್ಕ್ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿದ್ದರಂತೆ. ಸಾಕಷ್ಟು ಆಸ್ಪತ್ರೆಗಳನ್ನು ಸುತ್ತಾಡಿ ಕೊನೆಗೆ ಚೈತ್ರಾ ತನ್ನ ತಾಯಿಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಳೆ. ಆರಂಭದಲ್ಲಿ ಜಿಲ್ಲಾಸ್ಪತ್ರೆಯಿಂದಲೂ ಚಂದ್ರಮ್ಮಳನ್ನು ಬೇರೆ ಆಸ್ಪತ್ರೆಗೆ ಸೇರಿಸಲು ಹೇಳಲಾಗಿತ್ತು. ನಂತರ ಮತ್ತೊಮ್ಮೆ ಚೈತ್ರಾ ತಾಯಿಯನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಬಂದ ಮೇಲೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
Advertisement
Advertisement
ಜಿಲ್ಲಾಸ್ಪತ್ರೆಯ ಡಾ.ನಿರಂಜನ ನೇತೃತ್ವದ ವೈದ್ಯರು ಹಾಗೂ ಸಿಬ್ಬಂದಿ ತಂಡ ಬರೋಬ್ಬರಿ ನಾಲ್ಕು ಗಂಟೆಗೂ ಅಧಿಕ ಕಾಲ ಚಂದ್ರಮ್ಮಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೊಳೆತ ಭಾಗವನ್ನು ಕತ್ತರಿಸಿ ತೆಗೆದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಚಂದ್ರಮ್ಮಳ ಜೀವ ಉಳಿಸಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಚಂದ್ರಮ್ಮಳ ಆರೋಗ್ಯ ಸಹಜ ಸ್ಥಿತಿಗೆ ಮರಳಿದೆ. ಇದನ್ನೂ ಓದಿ: ಹೆಡ್ ಕಾನ್ಸ್‌ಟೇಬಲ್ ಮನೆಗೆ ಕನ್ನ