ಹಾವೇರಿ: ಹೋರಿ ಹಬ್ಬ ಅಂದ್ರೆ ಹಾವೇರಿ ಜಿಲ್ಲೆಯ ರೈತರಿಗೆ ಅತ್ಯಂತ ಪ್ರಿಯವಾದ ಹಬ್ಬ. ಇಂತಹ ಸಂಭ್ರದಲ್ಲಿ ನಂದಿ, ಪೈಲ್ವಾನ್, ಗರುಡ, ವಿಷ್ಣುದಾದಾ ಸೇರಿದಂತೆ ಅನೇಕ ಹೆಸರಿನ ಹೋರಿಗಳನ್ನು ಹಿಡಿಯಲು ಯುವಕರು ಹರಸಾಹಸಪಟ್ಟ ಪ್ರಸಂಗ ಇಂದು ಹಾವೇರಿ ತಾಲೂಕು ದೇವಗಿರಿ ಗ್ರಾಮದಲ್ಲಿ ನಡೆಯಿತು.
ದೇವಗಿರಿ ಗ್ರಾಮದಲ್ಲಿ ಇಂದು ರಾಜ್ಯಮಟ್ಟದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹಾವೇರಿ, ಶಿಕಾರಿಪುರ, ಸೇರಿದಂತೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯಿಂದ 200ಕ್ಕೂ ಹೆಚ್ಚು ಹೋರಿಗಳು ಭಾಗವಹಿಸಿದ್ದವು. ಆದರೆ ಇಲ್ಲಿ ಯಾವುದೇ ರೀತಿಯಾದ ಬಹುಮಾನಗಳನ್ನು ಇಟ್ಟಿರಲಿಲ್ಲ. ಆದರೂ ಬಹುಮಾನ ಸ್ಪರ್ಧೆಯಲ್ಲಿ ಉತ್ಸಾಹ ಕಡಿಮೆಯಾಗಿರಲ್ಲಿಲ್ಲ.
Advertisement
Advertisement
ರೈತರು ಹೋರಿ ಬೆದರಿಸುವ ಸ್ಪರ್ಧೆಗಾಗಿ ವರ್ಷಗಟ್ಟಲೇ ಹೋರಿಗಳನ್ನು ಕಟ್ ಮಸ್ತಾಗಿ ತಯಾರು ಮಾಡಲಾಗುತ್ತಾರೆ. ಹೀಗೆ ತಯಾರಾದ ಹೋರಿಗಳಿಗೆ ನಂದಿ, ಪೈಲ್ವಾನ್, ಗರುಡ, ವಿಷ್ಣುದಾದಾ ಸೇರಿದಂತೆ ವಿವಿಧ ಸಿನಿಮಾ ಹಾಗೂ ನಟರ ಹೆಸರನ್ನು ಇಡಲಾಗುತ್ತದೆ. ಮೈದಾನದಲ್ಲಿ ಹೋರಿಗಳು ಓಡೋವಾಗ ಅವುಗಳನ್ನ ತಡೆದು ನಿಲ್ಲಿಸುವುದಕ್ಕೆ ಪೈಲ್ವಾನ್‍ರು ಕಸರತ್ತು ಮಾಡುತ್ತಾರೆ. ಕೆಲವೊಂದು ಬಾರಿ ಹೋರಿಗಳು ಪೈಲ್ವಾನ್‍ರ ಕೈಗೆ ಸಿಗದಂತೆ ಮಿಂಚಿನ ಓಟ ಕಿಳುತ್ತವೆ.
Advertisement
ಕೊಬ್ಬರಿ ಹೋರಿ ಹಬ್ಬದ ದಿನ ರೈತರು ಸಾವಿರಾರು ರೂ. ಖರ್ಚು ಮಾಡಿ ಹೋರಿಗಳಿಗೆ ಕೊಬ್ಬರಿ ಹಾರ, ಕೋಡಿಗೆ ಬಲೂನ್‍ಗಳನ್ನ ಕಟ್ಟಿರುತ್ತಾರೆ. ಮೈಮೇಲೆ ಜೂಲಾ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನ ಹಾಕಿ ಹೋರಿಗಳನ್ನು ಅಲಂಕಾರ ಮಾಡಿ, ಓಡಿಸುತ್ತಾರೆ. ಯಾರ ಕೈಗೂ ಸಿಗದಂತೆ ಓಡಿದ ಹೋರಿ ವಿಜಯಿ ಹೋರಿ ಅನ್ನಿಸಿದರೆ, ಪೈಲ್ವಾನರ ಕೈಗೆ ಸಿಕ್ಕ ಹೋರಿಯನ್ನ ಸ್ಪರ್ಧೆಯಿಂದ ಔಟ್ ಮಾಡಲಾಗುತ್ತದೆ. ಹೀಗೆ ಹೋರಿ ಬೆದರಿಸುವ ಸ್ಪರ್ಧೆಯ ಅಖಾಡದಲ್ಲಿ ಭರ್ಜರಿಯಾಗಿ ಓಡುವ ಹೋರಿಗಳನ್ನು ನೋಡುವುದು ನೆರೆದಿದ್ದ ಜನರಿಗೆ ಸಖತ್ ಖುಷಿ ಕೊಡುತ್ತದೆ.