ಮಂಗಳೂರು: ಹಾವೇರಿಯ ಬ್ಯಾಡಗಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಪಾಟೀಲ್ ಸೋದರ ಸಂಬಂಧಿ ಮೃತ್ಯುಂಜಯ ಪಾಟೀಲ್ ಮತ್ತು ಪತ್ನಿ ನೇತ್ರಾವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಧರ್ಮಸ್ಥಳಕ್ಕೆ ಆಗಮಿಸಿದ್ದ ಈ ದಂಪತಿ ಮಂಗಳವಾರ ಸಂಜೆ ತಾವು ತಂಗಿದ್ದ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಮೃತ್ಯುಂಜಯ ಪಾಟೀಲ್ ಡೆತ್ ನೋಟ್ ಬರೆದಿದ್ದಾರೆ. ರಾಜ್ಯ ರಾಜಕೀಯ ಹಣ, ಹೆಂಡದಿಂದ ಕೀಳುಮಟ್ಟಕ್ಕೆ ಇಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಉಲ್ಲೇಖಿಸಿದ್ದಾರೆ.
ಹಾಳಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೋಡಿಕೊಳ್ಳಬೇಕು. ಅವರು ಸರಿದಾರಿಗೆ ತರಬೇಕೆಂಬ ನಿರೀಕ್ಷೆಯಿಂದ ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತಾ ಡೆತ್‍ನೋಟ್‍ನಲ್ಲಿ ಬರೆದಿಟ್ಟಿದ್ದಾರೆ.
ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಮೃತ್ಯುಂಜಯ ಪಾಟೀಲ್ ಈ ಸಲದ ಚುನಾವಣೆಯಲ್ಲಿ ಹಣದ ವ್ಯವಹಾರ ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ.