ಹಾವೇರಿ: ಈ ‘ಹಠವಾದಿ’ಗೆ ಮನೆಯವರು, ಊರಿನವರು ಮಾತ್ರವಲ್ಲ ಸಾಕಷ್ಟು ಅಭಿಮಾನಿಗಳ ದಂಡೇ ಇದೆ. ಶರವೇಗದ ಓಟಕ್ಕೆ ಹೆಸರಾಗಿದ್ದ ಹಠವಾದಿ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಈ ಹಠವಾದಿ ಸೆಪ್ಟೆಂಬರ್ 21ರಂದು ಉಸಿರು ನಿಲ್ಲಿಸಿದ್ದ. ಇದೀಗ ಮನೆಯವರು ಆತನಿಗೆ ತಿಥಿಕಾರ್ಯ ನೆರವೇರಿಸಿ, ಊರಿನವರು ಮತ್ತು ಅಭಿಮಾನಿಗಳಿಗೆ ತಿಥಿ ಊಟ ಹಾಕಿದ್ರು.
Advertisement
ಹೌದು. ಹಾವೇರಿ (Haveri) ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದ ಸುರೇಶ ಸೋಮನಕಟ್ಟಿ ಎಂಬ ರೈತ 18 ವರ್ಷಗಳ ಹಿಂದೆ ಶಿವಮೊಗ್ಗದಿಂದ ಹೋರಿಯೊಂದನ್ನು ತಂದಿದ್ರು. ತಂದ ವರ್ಷವೇ ಹೋರಿಯನ್ನು ಹೋರಿ (Bull) ಹಬ್ಬದ ಅಖಾಡಕ್ಕೆ ಬಿಡೋಕೆ ಶುರು ಮಾಡಿದ್ರು. ಹೋರಿಯ ಗತ್ತು, ದವಲತ್ತು, ಅದರ ಗುಣಗಳನ್ನು ನೋಡಿ ಅದಕ್ಕೆ ಹಠವಾದಿ ಅಂತ ಹೆಸರಿಟ್ಟರು. ಅಲ್ಲಿಂದ ಶುರುವಾದ ಹಠವಾದಿಯ ಶರವೇಗದ ಓಟ ಬಹುಮಾನ ಬಾಚಿಕೊಳ್ತಿದ್ದ. ಹೀಗಿದ್ದ ಹೋರಿ ಹಬ್ಬದ ಹಠವಾದಿ ಸೆಪ್ಟೆಂಬರ್ 21ರಂದು ಉಸಿರು ನಿಲ್ಲಿಸಿದ್ದ. ಹಠವಾದಿಯ ಮೃತಪಟ್ಟು ನೆನ್ನೆಗೆ 5 ದಿನಗಳು ಕಳೆದಿದ್ದರಿಂದ ಮನುಷ್ಯರಿಗೆ ತಿಥಿ ಕಾರ್ಯ ಮಾಡುವಂತೆ ಹಠವಾದಿ ಹೋರಿಗೂ ತಿಥಿ ಕಾರ್ಯ ನೆರವೇರಿಸಿದ್ರು. ಇದನ್ನೂ ಓದಿ: ಕೆಟ್ಟು ಹೋದ ಸರ್ವರ್‌ಗೆ ಪಿಂಡ ಇಟ್ಟ ಹೋರಾಟಗಾರ’
Advertisement
Advertisement
ಮನುಷ್ಯರು ಕಾಲವಾದಾಗ ತಿಥಿ ಕಾರ್ಯ ಮಾಡುತ್ತಾರೆ. ಅದೇ ರೀತಿ ಹಠವಾದಿ ಹೋರಿ ಮೃತಪಟ್ಟ 5 ದಿನಗಳಾಗಿದ್ದು, ಮಾಲೀಕ ನೆಚ್ಚಿನ ಹೋರಿಗೆ ತಿಥಿ ಕಾರ್ಯ ನೆರವೇರಿಸಿದ್ರು. ತರಹೇವಾರಿ ಹಣ್ಣುಗಳು, ಸಿಹಿ ತಿನಿಸುಗಳು ಇಟ್ಟು ಗ್ರಾಮದಲ್ಲಿನ ಸ್ವಾಮೀಜಿಯನ್ನು ಕರೆಸಿ ಪೂಜೆ ನೆರವೇರಿಸಿದರು. ಹಠವಾದಿ ಹೆಸರಿನ ಹೋರಿ ಮನೆಗೆ ಬಂದಾಗಿಂದ ಮನೆಯವರಿಗೆ ಸಾಕಷ್ಟು ಒಳ್ಳೆಯದಾಗಿತ್ತಂತೆ. ಜಮೀನು, ಸೈಟ್ ಕೂಡ ಖರೀದಿ ಮಾಡಿದ್ದಾರಂತೆ.
Advertisement
ಹಾವೇರಿ, ದಾವಣಗೆರೆ, ಶಿವಮೊಗ್ಗ (Shivamogga) ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ಹೋರಿ ಹಬ್ಬದ ಅಖಾಡದಲ್ಲಿ ಹಠವಾದಿ ದೊಡ್ಡ ಹೆಸರು ಮಾಡಿದ್ದರಿಂದ ಅಭಿಮಾನಿಗಳು (Followers) ಹೋರಿಯ ತಿಥಿ ಕಾರ್ಯದಲ್ಲಿ ಭಾಗವಹಿಸಿ, ಹೋರಿಗೆ ಪೂಜೆ ಸಲ್ಲಿಸಿ, ಗೋಧಿ ಹೂಗ್ಗಿಯ ಊಟ ಸವಿದು ಮನೆಯತ್ತ ಹೆಜ್ಜೆ ಹಾಕಿದ್ರು.