ಹಾವೇರಿ: ಅಪಘಾತ ಪ್ರಕರಣದಲ್ಲಿ (Accident Case) ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ನೀಡಿದ್ದಕ್ಕಾಗಿ ತಂದೆಗೆ 27,000 ರೂ. ದಂಡ ವಿಧಿಸಿ ರಾಣೆಬೆನ್ನೂರು (Ranebennur) ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಳೆದ ಜುಲೈ 30ರಂದು ರಾಣೆಬೆನ್ನೂರು ನಗರದ ಹಲಗೇರಿ ಕ್ರಾಸ್ ಬಳಿ ಬೈಕ್ ಅಪಘಾತವಾಗಿತ್ತು. ಅಪಘಾತದಲ್ಲಿ ಜಾಕಿರ್ ಜಮಾಲುದ್ದೀನ್ ಕಮದೋಡ ಎಂಬ ವ್ಯಕ್ತಿ ಗಾಯಗೊಂಡಿದ್ದು, ಅಪರಾಧ ಪ್ರಕರಣ ದಾಖಲಾಗಿತ್ತು. ರಾಣೆಬೆನ್ನೂರು ನಗರದ ಕಡ್ರಕಟ್ಟಿ ನಗರದ ನಿವಾಸಿ ದಿಳ್ಳೆಪ್ಪ ಕಾಟೆ ತನ್ನ ಅಪ್ರಾಪ್ತ ಮಗನಿಗೆ ಬೈಕ್ ನೀಡಿ ಅಪಘಾತವಾಗಿತ್ತು. ಈ ಪ್ರಕರಣದಲ್ಲಿ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ ರಾಣೆಬೆನ್ನೂರು ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು 27,000 ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ದೇವರಕೋಣಕ್ಕಾಗಿ ಎರಡು ಗ್ರಾಮಸ್ಥರ ನಡುವೆ ಫೈಟ್ – ಡಿಎನ್‍ಎ ಟೆಸ್ಟ್ ನಡೆಸುವಂತೆ ಆಗ್ರಹ
ಅಪಘಾತದ ಘಟನೆಯ ಕುರಿತು ರಾಣೆಬೆನ್ನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದಿಳ್ಳೆಪ್ಪ ಕಾಟೆ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಬೈಕ್ ಮಾಲೀಕ ತಪ್ಪಿತಸ್ಥ ಎಂದು ತೀರ್ಪು ನೀಡಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರೈತರ ಪ್ರತಿಭಟನೆ; ಹರಿಯಾಣದಲ್ಲಿ ಡಿ.17 ರ ವರೆಗೆ ಇಂಟರ್ನೆಟ್ ಸೇವೆ ಸ್ಥಗಿತ