ಹಾವೇರಿ: ನಾಡ ಪ್ರಸಿದ್ಧಿ ಕೊಬ್ಬರಿ ಹೋರಿ (Kobbari Hori) ಸ್ಪರ್ಧೆಯಲ್ಲಿ ಹೆಸರು ಮಾಡಿ ಬೆಳ್ಳಿ, ಬಂಗಾರ ಪದಕ ಬಹುಮಾನವಾಗಿ ಗೆದ್ದು ತಂದುಕೊಟ್ಟಿದ್ದ `ಮೈಸೂರು ಹುಲಿ-193′ (Mysuru Huli 193) ಖ್ಯಾತಿಯ ಹೋರಿ ಅನಾರೋಗ್ಯದಿಂದ ಸಾವನ್ನಪ್ಪಿದೆ.
ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು (Ranebennur) ನಗರದ ಕುರುಬಗೇರಿ ಓಣಿಯಲ್ಲಿ ಕೊಬ್ಬರಿ ಹೋರಿ ಸಾವನ್ನಪ್ಪಿದ್ದು, ಸಾವಿರಾರು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ಮಾಲೀಕರು ಹೋರಿಯನ್ನ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಈ ಹೋರಿ ರೈತ (Farmer) ನಾಗಪ್ಪ ಗೂಳಣ್ಣನವರ್ ಎಂಬವರಿಗೆ ಸೇರಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಪ್ರಬಲ ಭೂಕಂಪ – 7 ಮಂದಿ ಸಾವು, 400ಕ್ಕೂ ಹೆಚ್ಚು ಜನರಿಗೆ ಗಾಯ
Advertisement
Advertisement
13 ವರ್ಷಗಳಿಂದ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಸೊಲಿಲ್ಲದ ಸರದಾರನಾಗಿದ್ದ `ಮೈಸೂರು ಹುಲಿ 193′ ಕೊಬ್ಬರಿ ಹೋರಿಯ ಸ್ಪರ್ಧೆಯಲ್ಲಿ ಬಂಗಾರ, ಬೆಳ್ಳಿ, ಬೈಕ್ ಸೇರಿದಂತೆ ಹಲವಾರು ಬಹುಮಾನಗಳನ್ನು ಗೆದ್ದುಕೊಟ್ಟಿತ್ತು. ಅಲ್ಲದೇ `ಪೀಪಿ ಹೋರಿ’ ಎಂದೂ ಹೆಸರು ಮಾಡಿತ್ತು. ಇದನ್ನೂ ಓದಿ: `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಪತ್ನಿ ಕೊಲೆ – ಆರೋಪಿ ಪತಿಯಿಂದ ರೋಚಕ ರಹಸ್ಯ ಬಯಲು
Advertisement
Advertisement
ಭಾನುವಾರ (ಜ.29) ಮಧ್ಯಾಹ್ನ 1:30ರ ವೇಳೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ, ಹಿಂದೂ ವಿಧಿವಿಧಾನಗಳ ಮೂಲಕ ಕೊಬ್ಬರಿ ಹೋರಿ ಅಂತ್ಯಕ್ರಿಯೆ ನಡೆಯಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k