ಹಾವೇರಿ| ಚರಂಡಿಯಲ್ಲಿ ಕೊಚ್ಚಿ ಹೋಗಿ ಬಾಲಕ ಸಾವು

Public TV
1 Min Read
Haveri rain boy death

ಹಾವೇರಿ: ಜಿಲ್ಲೆಯಾದ್ಯಂತ ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆ ಕಾಣದೆ ಬಾಲಕನೋರ್ವ ಚರಂಡಿಗೆ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಹಾವೇರಿ (Haveri) ಎಸ್‌ಪಿ ಕಚೇರಿ ಮುಂಭಾಗದಲ್ಲಿ ನಡೆದಿದೆ.

ನೀವೆದನ್ ಬಸವರಾಜ್ ಗುಡಗೇರಿ (12) ಮೃತಪಟ್ಟ ಬಾಲಕ. ಮಳೆ ಹೆಚ್ಚಾಗಿರೋ ಹಿನ್ನೆಲೆ ಬಾಲಕ ಬೆಳಗ್ಗೆ ರಸ್ತೆಯಲ್ಲಿ ನೀರನ್ನ ನೋಡುಲು ಹೋಗಿದ್ದ. ಈ ವೇಳೆ ರಸ್ತೆ ಕಾಣದೆ ಚರಂಡಿಗೆ ಬಿದ್ದು ಬಾಲಕ ಕೊಚ್ಚಿ ಹೋಗಿದ್ದಾನೆ. ಸುದ್ದಿ ಕೇಳುತ್ತಿದ್ದಂತೆ ತಾಯಿ ಅಸ್ವಸ್ಥರಾಗಿದ್ದು, ಅಂಬುಲೆನ್ಸ್ ಮೂಲಕ ಅವರನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ವಾಲ್ಮೀಕಿ ಜಯಂತಿ; ಮಹರ್ಷಿಗಳ ಪ್ರತಿಮೆಗೆ ಸಿಎಂ ಪುಷ್ಪಾರ್ಚನೆ

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ, ಎಸ್ಪಿ ಅಂಶುಕುಮಾರ್, ಪೊಲೀಸ್ ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದಾರೆ. ಬಾಲಕನ ಪತ್ತೆಗಾಗಿ ಸತತ ಒಂದೂವರೆ ಗಂಟೆಯಿಂದ ಪಿ.ಬಿ ರಸ್ತೆ ಬಳಿ ಇರುವ ಚರಂಡಿಯಲ್ಲಿ ಶೋಧ ಕಾರ್ಯ ಮುಂದುವರೆಯುತ್ತಿದೆ. ನಿರಂತರ ಮಳೆಯಾದ ಹಿನ್ನೆಲೆ ಚರಂಡಿಯಲ್ಲಿ ವೇಗವಾಗಿ ಮಳೆ ನೀರು ಹರಿಯುತ್ತಿದ್ದು, ಶೋಧ ಕಾರ್ಯಕ್ಕೆ ಇದು ಸವಾಲಾಗಿದೆ. ಇದನ್ನೂ ಓದಿ: ರಹಸ್ಯವಾಗಿ ಅಣ್ಣ-ಅತ್ತಿಗೆಯ ಸೆಕ್ಸ್‌ ವೀಡಿಯೋ ಚಿತ್ರೀಕರಣ – ಕೋರ್ಟ್‌ನಲ್ಲಿ ಕ್ಷಮೆ ಕೇಳಿದ ಫುಟ್‌ಬಾಲರ್‌

Share This Article