ಬೆಂಗಳೂರು/ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗ್ತಿರುವಂತೆ ದೇವೇಗೌಡರ ಕುಟುಂಬದಲ್ಲಿ ಯಾರು ಎಲೆಕ್ಷನ್‍ಗೆ ನಿಲ್ಲಬೇಕು, ಯಾರು ನಿಲ್ಲಬಾರದು ಅನ್ನೋ ಚರ್ಚೆ ತೀವ್ರಗೊಂಡಿದೆ.
Advertisement
ಆದ್ರೆ ಬೆಂಗಳೂರಲ್ಲಿ ಮಾತಾಡಿದ ಮಾಜಿ ಪ್ರಧಾನಿ ದೇವೇಗೌಡರು, ಪ್ರಜ್ವಲ್ ರಾಜಕೀಯ ಎಂಟ್ರಿಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಪರಿಸ್ಥಿತಿ ನೋಡಿ ತೀರ್ಮಾನ ಮಾಡ್ತೇವೆ ಅಂತಾ ಹೇಳಿದ್ದಾರೆ. ಮೊನ್ನೆಯಷ್ಟೇ ಪಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ತಮ್ಮ ಪುತ್ರ ರಾಜಕೀಯ ಪ್ರವೇಶ ಖಚಿತ. ಆದ್ರೆ ಯಾವ ಕ್ಷೇತ್ರದಿಂದ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದರು.
Advertisement
Advertisement
ಅತ್ತ ಹೆಚ್.ಡಿ ಕುಮಾರಸ್ವಾಮಿ ಮತ್ತೆ ತಮ್ಮ ಗ್ರಾಮ ವಾಸ್ತವ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಮಂಗಳವಾರದಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ಧರ್ಮಪಾಲ್ ಎಂಬ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ರು.
Advertisement
ಕುಮಾರಸ್ವಾಮಿ ಅವರ ಆಗಮನಕ್ಕಾಗಿ ಬೆಳಗ್ಗಿನ ಜಾವ 4.30ರವರೆಗೂ ಕಾದು ಕೂತಿದ್ದ ಸ್ಥಳೀಯರು, ಕಾರ್ಯಕರ್ತರು, ಅಭಿಮಾನಿಗಳಿಗೆ ವಿಕಾಸ ವಾಹಿನಿ ಬಸ್ ತಮ್ಮ ಗ್ರಾಮ ಪ್ರವೇಶ ಮಾಡುತ್ತಿದ್ದಂತೆ, ಅದ್ಧೂರಿ ಸ್ವಾಗತ ಕೋರಿದ್ರು. ಧರ್ಮಪಾಲ್ ಅವರ ಮನೆಯಲ್ಲಿ ಹಾಲು ಮತ್ತು ಸೇಬು ಹಣ್ಣು ಸೇವಿಸಿದ ನಂತರ ಹೆಚ್‍ಡಿಕೆ ವಿಶ್ರಾಂತಿ ಪಡೆದ್ರು. ಹೊರಗಡೆ ನೆರೆದಿದ್ದ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಕುಮಾರಣ್ಣನಿಗೆ ಜೈ ಎಂದು ಕೂಗಾಡಿ, ಕುಣಿದು ಸಂಭ್ರಮಿಸಿದ್ರು.
ಇಂದು ಬೆಳಗ್ಗೆ ಹೆಚ್‍ಡಿಕೆ ಧರ್ಮಪಾಲ್ ಪತ್ನಿ ನಾಗರತ್ನ ಮಾಡಿದ ರಾಗಿರೊಟ್ಟಿ, ಕಾಯಿ ಚಟ್ನಿ, ಸೊಪ್ಪಿನ ಪಲ್ಯ ಸೇವಿಸಿದ್ರು. ಕುಮಾರಸ್ವಾಮಿಗೆ ಜೆಡಿಎಸ್ ವಕ್ತಾರ ಬೋಜೇಗೌಡ, ಧರ್ಮೇಗೌಡ, ಕೋನರೆಡ್ಡಿ, ಮೂಡಿಗೆರೆ ಎಂಎಲ್‍ಎ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಸಾಥ್ ನೀಡಿದ್ರು.