ಹೆಚ್ಚಾಗಿ ಬಾಯಾರಿಕೆಯಾದಾಗ ದಾಹ ತಣಿಸಲು ನಿಂಬೆ ಹಣ್ಣಿನ ಜ್ಯೂಸ್ ಅನ್ನೇ ಮಾಡಿಕೊಳ್ಳುತ್ತಾರೆ. ಆದರೆ ಪ್ರತೀ ಸಲ ಅದನ್ನೇ ಮಾಡಿ, ಕುಡಿದು ಬೋರ್ ಎನಿಸಲ್ವಾ? ಪ್ರತಿ ಸಲ ಅಡುಗೆ ಮನೆಯಲ್ಲಿ ಎಕ್ಸ್ಪರಿಮೆಂಟ್ ಮಾಡೋದು ಮುಖ್ಯ ಹಾಗೂ ಮಜಾ. ಇಂದು ಸ್ವಲ್ಪ ವಿಭವಿನ್ನವಾಗಿ ಮಸಾಲಾ ನಿಂಬೂ ಸೋಡಾ ಮಾಡೋದು ಹೇಗೆ ಎಂಬುದನ್ನು ನೋಡೋಣ. ನಿಮ್ಮ ಅಡುಗೆ ಮನೆಯಲ್ಲಿಯೇ ಹೊಸ ಪ್ರಯತ್ನದೊಂದಿಗೆ ಹೊಸ ರುಚಿಯನ್ನು ಆಸ್ವಾದಿಸಿ.
ಬೇಕಾಗುವ ಪದಾರ್ಥಗಳು:
ತಾಜಾ ನಿಂಬೆ ರಸ – ಅರ್ಧ ಕಪ್
ಕ್ಲಬ್ ಸೋಡಾ – 4 ಕಪ್
ಸಕ್ಕರೆ – 3 ಟೀಸ್ಪೂನ್
ಪುದೀನಾ ಎಲೆಗಳು – ಅರ್ಧ ಕಪ್
ಚ್ಯಾಟ್ ಮಸಾಲಾ – 2 ಟೀಸ್ಪೂನ್
ಹುರಿದ ಜೀರಿಗೆ – 1 ಟೀಸ್ಪೂನ್
ಮಾಡುವ ವಿಧಾನ:
* ತಾಜಾ ಪುದೀನಾ ಎಲೆಗಳನ್ನು ತೆಗೆದುಕೊಂಡು ಅದನ್ನು ಹುರಿದ ಜೀರಿಗೆಯೊಂದಿಗೆ ಗ್ರೈಂಡ್ ಮಾಡಿ.
* ಗ್ರೈಂಡ್ ಮಾಡಿದ ಪುದೀನಾವನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ನಿಂಬೆ ರಸ, ಸಕ್ಕರೆ, ಚ್ಯಾಟ್ ಮಸಾಲಾ, ಸ್ವಲ್ಪ ಉಪ್ಪು ಹಾಗೂ ಕ್ಲಬ್ ಸೋಡಾವನ್ನು ಹಾಕಿ ಮಿಶ್ರಣ ಮಾಡಿ.
* ಬೇಕೆಂದಲ್ಲಿ ಐಸ್ ಕ್ಯೂಬ್‌ಗಳನ್ನು ಬಳಸಿ, ಲೋಟಗಳಿಗೆ ಸುರಿಯಿರಿ.
* ಅಲಂಕಾರಕ್ಕೆ ಬೆಂಕೆಂದಲ್ಲಿ ಸ್ವಲ್ಪ ಪುದೀನಾ ಎಲೆಗಳು ಹಾಗೂ ನಿಂಬೆ ಹಣ್ಣಿನ ಹೋಳುಗಳನ್ನು ಬಳಸಿ, ಚಿಲ್ ಆಗಿ ಸವಿಯಿರಿ.