ದೇಶಾದ್ಯಂತ ಸ್ಟ್ರೀಟ್ ಫುಡ್‌ಗೆ (Street food) ಮಂಚೂರಿಯನ್ (Manchurian) ಫೇಮಸ್. ಅದರಲ್ಲೂ ಗೋಬಿ ಮಂಚೂರಿಯನ್ ಇಷ್ಟ ಪಡದವರೇ ಇಲ್ಲವೇನೋ. ಇದೇ ರುಚಿಯನ್ನು ನಾವು ಬೇಬಿ ಕಾರ್ನ್, ಮಶ್ರೂಮ್‌ನಲ್ಲೂ ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಆಲೂಗಡ್ಡೆಯಿಂದ ಮಂಚೂರಿಯನ್ (Potato Manchurian) ಹೆಚ್ಚಿನವರು ಮಾಡಿ ಸವಿದಿರಲಿಕ್ಕಿಲ್ಲ. ಇಂದು ನಾವು ಆಲೂಗಡ್ಡೆಯಿಂದ ರುಚಿಕರವಾದ ಮಂಚೂರಿಯನ್ ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇವೆ. ನೀವೂ ಮನೆಯಲ್ಲಿ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಲು:
ನೀರು- 4 ಕಪ್
ಉಪ್ಪು – 1 ಟೀಸ್ಪೂನ್
ಮಧ್ಯಮ ಗಾತ್ರಕ್ಕೆ ಹೆಚ್ಚಿದ ಆಲೂಗಡ್ಡೆ – 2
ಹುರಿಯಲು:
ಮೈದಾ – ಅರ್ಧ ಕಪ್
ಕಾರ್ನ್ ಫ್ಲೋರ್ – ಕಾಲು ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – 2 ಟೀಸ್ಪೂನ್
ನೀರು – ಅರ್ಧ ಕಪ್
ಎಣ್ಣೆ – ಡೀಪ್ ಫ್ರೈಗೆ
Advertisement
Advertisement
ಮಂಚೂರಿಯನ್ ತಯಾರಿಸಲು:
ಎಣ್ಣೆ – 4 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 2 ಎಸಳು
ಸೀಳಿದ ಮೆಣಸಿನಕಾಯಿ – 1
ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2 ಟೀಸ್ಪೂನ್
ಹೆಚ್ಚಿದ ಕ್ಯಾಪ್ಸಿಕಂ – ಅರ್ಧ
ಹೆಚ್ಚಿದ ಈರುಳ್ಳಿ – ಅರ್ಧ
ಟೊಮೆಟೊ ಸಾಸ್ – 2 ಟೀಸ್ಪೂನ್
ವಿನೆಗರ್ – 1 ಟೀಸ್ಪೂನ್
ಸೋಯಾ ಸಾಸ್ – 1 ಟೀಸ್ಪೂನ್
ಚಿಲ್ಲಿ ಸಾಸ್ – 1 ಟೀಸ್ಪೂನ್
ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಸ್ಲರಿ ತಯಾರಿಸಲು:
ಕಾರ್ನ್ ಫ್ಲೋರ್ – 1 ಟೀಸ್ಪೂನ್
ನೀರು – ಕಾಲು ಕಪ್
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ 4 ಕಪ್ ನೀರನ್ನು ಹಾಕಿ, ಅದಕ್ಕೆ 1 ಟೀಸ್ಪೂನ್ ಉಪ್ಪು ಹಾಕಿ ಕುದಿಸಿ.
* ಕುದಿ ಬಂದ ಬಳಿಕ ಅದಕ್ಕೆ ಆಲೂಗಡ್ಡೆ ಹಾಕಿ 8 ನಿಮಿಷ ಬೇಯಿಸಿ.
* ಈಗ ಆಲೂಗಡ್ಡೆಯನ್ನು ನೀರಿನಿಂದ ತೆಗೆದು ಆರಲು ಬಿಡಿ.
* ಈಗ ಆಲೂಗಡ್ಡೆ ಫ್ರೈ ಮಾಡಲು ಒಂದು ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಉಪ್ಪು ಹಾಕಿ, ಅರ್ಧ ಕಪ್ ನೀರು ಸೇರಿಸಿ ಗಂಟಿಲ್ಲದಂತೆ ಹಿಟ್ಟು ತಯಾರಿಸಿ.
* ಈಗ ಬೇಯಿಸಿದ ಆಲೂಗಡ್ಡೆಯನ್ನು ಹಿಟ್ಟಿನಲ್ಲಿ ಅದ್ದಿ, ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
* ಆಲೂಗಡ್ಡೆ ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಪಕ್ಕಕ್ಕೆ ಇರಿಸಿ.
* ಈಗ ಒಂದು ಕಡಾಯಿ ತೆಗೆದುಕೊಂಡು, ಅದಕ್ಕೆ ಎಣ್ಣೆ, ಬೆಳ್ಳುಳ್ಳಿ, ಮೆಣಸಿನಕಾಯಿ, ಸ್ಪ್ರಿಂಗ್ ಆನಿಯನ್ ಹಾಗೂ ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ.
* ಕ್ಯಾಪ್ಸಿಕಂ ಹಾಗೂ ಈರುಳ್ಳಿ ಸ್ವಲ್ಪ ಕುಗ್ಗಿದ ಬಳಿಕ ಅದಕ್ಕೆ ಟೊಮೆಟೊ ಸಾಸ್, ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್, ಕರಿಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
* ಈಗ ಸಣ್ಣದೊಂದು ಬೌಲ್‌ನಲ್ಲಿ 1 ಟೀಸ್ಪೂನ್ ಕಾರ್ನ್ ಫ್ಲೋರ್ ಹಾಕಿ, ಅದಕ್ಕೆ ಕಾಲು ಕಪ್ ನೀರು ಸೇರಿಸಿ ದಪ್ಪನೆಯ ಸ್ಲರಿ ಮಿಶ್ರಣ ತಯಾರಿಸಿ.
* ಈಗ ಹುರಿಯುತ್ತಿರುವ ಮಿಶ್ರಣಕ್ಕೆ ಸ್ಲರಿ ಸೇರಿಸಿ, ಮಿಕ್ಸ್ ಮಾಡಿ.
* ಈಗ ಹುರಿದ ಆಲೂಗಡ್ಡೆಯನ್ನು ಅದಕ್ಕೆ ಹಾಕಿ, ನಿಧಾನವಾಗಿ ಮಿಶ್ರಣ ಮಾಡಿ.
* ಇದೀಗ ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ.