ಪ್ರಯಾಗ್‌ರಾಜ್‌ಗೆ ಭೇಟಿ ಕೊಟ್ಟಾಗ ಈ ರೆಸಿಪಿಯನ್ನೊಮ್ಮೆ ನೀವು ಸವಿಯಲೇಬೇಕು. ಅಲ್ಲಿನ ಈ ಪುರಾತನ ಖಾದ್ಯ ಮಸಾಲೆಯುಕ್ತ ಮತ್ತು ಕಟುವಾದ ರುಚಿಯನ್ನು ಹೊಂದಿರುವ ಕಚೋರಿಯನ್ನು ಉತ್ತರ ಭಾರತದಾದ್ಯಂತ ಪ್ರಸಿದ್ಧವಾಗಿರುವ ಆಲೂಗಡ್ಡೆಯ ಸಬ್ಜಿ ಜೊತೆ ಬಡಿಸಲಾಗುತ್ತದೆ. ಶುದ್ಧ ದೇಸೀ ತುಪ್ಪ ಬಳಸಿ ಕರಿಯುವ ಕಚೋರಿ ಅದ್ಭುತ ರುಚಿ ಹೊಂದಿರುತ್ತದೆ. ಕಚೋರಿ ಸಬ್ಜಿ ಸವಿಯಬೇಕೆಂದು ನಿಮಗೂ ಎನಿಸಿದರೆ ಪ್ರಯಾಗ್‌ರಾಜ್‌ಗೇ ಹೋಗಬೇಕೆಂದೇನಿಲ್ಲ. ನಾವಿಂದು ಈ ರುಚಿಕರ ರೆಸಿಪಿಯನ್ನು ನಿಮಗೂ ಹೇಳಿಕೊಡಲಿದ್ದೇವೆ.
Advertisement
ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು – ಅರ್ಧ ಕೆಜಿ
ಎಣ್ಣೆ – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಉದ್ದಿನ ಬೇಳೆ – 1 ಕಪ್
ಸೋಂಫ್ ಪುಡಿ – 3 ಟೀಸ್ಪೂನ್
ಕೊತ್ತಂಬರಿ ಪುಡಿ – 3 ಟೀಸ್ಪೂನ್
ಹಿಂಗ್ – ಚಿಟಿಕೆ
ಆಮ್ಚೂರ್ ಪುಡಿ – 1 ಟೀಸ್ಪೂನ್
ಚಾಟ್ ಮಸಾಲಾ – 2 ಟೀಸ್ಪೂನ್
ಗರಂ ಮಸಾಲಾ – 1 ಟೀಸ್ಪೂನ್
ತುಪ್ಪ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಮಹಾರಾಷ್ಟ್ರ ಶೈಲಿಯ ಶೇಂಗಾ ಚಟ್ನಿ ಪುಡಿ ತಿಂದು ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಉದ್ದಿನಬೇಳೆಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಸ್ಟ್ರೈನರ್‌ನಲ್ಲಿ ಹಾಕಿ ಬಸಿದುಕೊಳ್ಳಿ.
* ಬಾಣಲೆಗೆ ಅದನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ ಒರಟಾಗಿ ರುಬ್ಬಿಕೊಳ್ಳಿ.
* ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ, ಎಲ್ಲಾ ಒಣ ಮಸಾಲೆ ಮತ್ತು ಕಾಲು ಕಪ್ ನೀರು ಹಾಕಿ.
* ಅದಕ್ಕೆ ರುಬ್ಬಿದ ಉದ್ದಿನಬೇಳೆ ಹಾಕಿ ಹುರಿಯಿರಿ. ನಂತರ ಉರಿಯನ್ನು ಆಫ್ ಮಾಡಿ ಪಕ್ಕಕ್ಕಿಡಿ.
* ಈಗ ಗೋಧಿ ಹಿಟ್ಟಿಗೆ ಉಪ್ಪು, ಎಣ್ಣೆ ಮತ್ತು ಉಗುರು ಬೆಚ್ಚಗಿನ ನೀರು ಸೇರಿಸಿ, ದಪ್ಪನೆಯ ಹಿಟ್ಟನ್ನು ತಯಾರಿಸಿ.
* ಅವುಗಳಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಸ್ವಲ್ಪ ಚಪ್ಪಟೆ ಮಾಡಿಕೊಂಡು, ಅದರ ಮಧ್ಯೆ ಸ್ವಲ್ಪ ಉದ್ದಿನ ಬೇಳೆಯ ಮಿಶ್ರಣವನ್ನು ಹಾಕಿ, ಹಿಟ್ಟಿನ ಬದಿಗಳನ್ನು ಮಧ್ಯಕ್ಕೆ ತಂದು ಮತ್ತೆ ಉಂಡೆಯಂತೆ ಸುತ್ತಿಕೊಳ್ಳಿ.
* ನಂತರ ಅನ್ನು ಕಚೋರಿಗಳಂತೆ ಕೈಯಿಂದ ಚಪ್ಪಟೆಗೊಳಿಸಿ.
* ಈಗ ಕಾದ ತುಪ್ಪದಲ್ಲಿ ಕಚೋರಿಗಳನ್ನು ಬಿಟ್ಟು ಡೀಪ್ ಫ್ರೈ ಮಾಡಿಕೊಳ್ಳಿ.
* ಕಚೋರಿ ಗೋಲ್ಡನ್ ಬ್ರೌನ್ ಬಂದ ಬಳಿಕ ತುಪ್ಪದಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ಗರಿಗರಿಯಾದ ಪ್ರಯಾಗ್‌ರಾಜ್ ಕಚೋರಿ ತಯಾರಾಗಿದ್ದು, ಇದನ್ನು ಆಲೂಗಡ್ಡೆಯ ಸಬ್ಜಿಯೊಂದಿಗೆ ಬಡಿಸಿ. ಆಲೂಗಡ್ಡೆ ಸಬ್ಜಿ ಇಲ್ಲದಿದ್ದರೆ ಚಟ್ನಿಯೊಂದಿಗೂ ಸವಿಯಬಹುದು. ಇದನ್ನೂ ಓದಿ: ಮಸಾಲೆಯುಕ್ತ ಬಾಂಬೆ ಆಲೂಗಡ್ಡೆ ರೆಸಿಪಿ ಒಮ್ಮೆ ಮಾಡಿ