Connect with us

ನಿಮ್ಮ ಬೈಕ್ ಮಾಡಿಫೈ ಮಾಡ್ಸಿದ್ದೀರಾ? ಹಾಗಿದ್ರೆ ಈ ಸುದ್ದಿ ಮಿಸ್ ಮಾಡದೆ ಓದಿ

ನಿಮ್ಮ ಬೈಕ್ ಮಾಡಿಫೈ ಮಾಡ್ಸಿದ್ದೀರಾ? ಹಾಗಿದ್ರೆ ಈ ಸುದ್ದಿ ಮಿಸ್ ಮಾಡದೆ ಓದಿ

ಬೆಂಗಳೂರು: ನೀವು ಬೈಕ್ ಪ್ರಿಯರೇ? ನೀವು ನಿಮ್ಮ ಬೈಕಿನ ಸೈಲೆನ್ಸರ್ ಅಥವಾ ಹಾರ್ನ್ ಮಾಡಿಫೈ ಮಾಡಿಸಿದ್ದರೆ ಈ ಸ್ಟೋರಿಯನ್ನು ನೀವು ಓದಬೇಕು. ಒಂದು ವೇಳೆ ನಿಮ್ಮ ಬೈಕ್ ಗಳನ್ನು ಮಾಡಿಫೈ ಮಾಡಿದ್ದರೆ ಪೊಲೀಸರ ಕೈಗೆ ಸಿಕ್ಕಿಬೀಳೋದು ಗ್ಯಾರೆಂಟಿ.

ಮಾರ್ಪಡು ಮಾಡಿದ ಬೈಕ್ ಗಳು ಪೊಲೀಸರ ಕೈಗೆ ಸಿಕ್ಕಿಬಿದ್ದರೆ ನಡುರಸ್ತೆಯಲ್ಲೇ ಬೈಕ್ ನ ಮಾಡಿಫೈಡ್ ವಸ್ತುವನ್ನು ಬಿಚ್ಚಿಸುತ್ತಾರೆ. ಸಿಲಿಕಾನ್ ಸಿಟಿಯಲ್ಲಿ ಪುಂಡ ಹುಡುಗರು ಬೈಕ್‍ಗಳ ಸೈಲೆನ್ಸರ್ ಹಾಗೂ ಹಾರ್ನ್ ಬದಲಾಯಿಸಿ ಕರ್ಕಶ ಶಬ್ಧ ಮಾಡುತ್ತಾ ಮಜಾ ತೆಗೆದುಕೊಳ್ಳುತ್ತಾರೆ. ಆದರೆ ಇನ್ಮುಂದೆ ಹಾಗೆ ಮಾಡುವ ಹಾಗಿಲ್ಲ. ಯಾಕಂದ್ರೆ ಹಿರಿಯರು ನೀಡಿದ ದೂರಿನಿಂದ ಪೊಲೀಸರು ಎಚ್ಚೆತ್ತಿದ್ದಾರೆ.

ಪೊಲೀಸರ ಕೈಗೆ ಮಾರ್ಪಡು ಮಾಡಿದ ಬೈಕ್ ಸಿಕ್ಕಿಬಿದ್ರೆ ಸ್ಥಳದಲ್ಲೇ ಸ್ಪೇರ್ ಪಾರ್ಟ್ಸ್ ಬಿಚ್ಚಿಸುತ್ತಾರೆ. ಇದುವರೆಗೂ ಹಲಸೂರು ಸಂಚಾರಿ ಪೊಲೀಸರು 108 ಸೈಲೆನ್ಸರ್ ಗಳನ್ನು ಬಿಚ್ಚಿಸಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ತಮ್ಮ ಬೈಕ್ ಗಳನ್ನು ಸುಂದರಗೊಳಿಸಲು ಬೇರೆ ಸೈಲೆನ್ಸರ್ ಹಾಕಿಕೊಂಡು ಮಜವಾಗಿ ರೈಡ್ ಮಾಡುವವರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುವುದಂತೂ ಖಂಡಿತ.

Advertisement
Advertisement