ಬೆಂಗಳೂರು: ದೇಶದ ಮಹಾನ್ ಆರ್ಥಿಕ ಕ್ರಾಂತಿಗೆ ರಹದಾರಿ ಎಂದೇ ಬಣ್ಣಿಸಲಾದ ಜಿ.ಎಸ್.ಟಿ ಜಾರಿಯಾಗುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಹೋಟೆಲ್ ಗಳಲ್ಲಿ ದರ ಏರಿಕೆಯ ಬಿಸಿ ತಟ್ಟಿದೆ. ಇಂದಿನಿಂದಲೇ ಹೋಟೆಲ್ ಗಳಲ್ಲಿ ದರ ಏರಿಕೆ ಜಾರಿಯಾಗಿದೆ. ಹೋಟೆಲ್‍ನಲ್ಲಿ ಟೀ, ಕಾಫಿ ದರ ಒಂದರಿಂದ ಎರಡು ರೂಪಾಯಿ ಏರಿಕೆಯಾಗಿದ್ದರೆ, ತಿಂಡಿಗಳ ದರ ಮೂರರಿಂದ ಎರಡು ರೂಪಾಯಿಗೆ ಏರಿಕೆಯಾಗಿದೆ. ಈ ಮೂಲಕ ಸದ್ಯಕ್ಕೆ ಗ್ರಾಹಕರ ಜೇಬಿಗೆ ಭರ್ಜರಿ ಕತ್ತರಿ ಬೀಳಲಾರಂಭಿಸಿದೆ.
ಇನ್ನು ನೀವು ಇಂದಿನಿಂದ ಹೋಟೆಲ್ ಗಳಿಗೆ ಹೋಗಿ ಫುಡ್ ಆರ್ಡರ್ ಮಾಡಿದಾಗ ಈ ಬದಲಾವಣೆ ಗಮನಿಸಬಹುದು. ಒಂದು ಟೀಗೆ 20 ರೂ. ಇದ್ದರೆ ಇದಕ್ಕೆ ಸಿ.ಜಿ.ಎಸ್.ಟಿ (ಕೇಂದ್ರ ಜಿ.ಎಸ್.ಟಿ) ಹಾಗೂ ಎಸ್.ಜಿ.ಎಸ್.ಟಿ (ರಾಜ್ಯ ಜಿ.ಎಸ್.ಟಿ) ಎಂದು ಪ್ರತ್ಯೇಕವಾಗಿ 6% ಟ್ಯಾಕ್ಸ್ ಹಾಕ್ತಾರೆ. ಇದರಿಂದಾಗಿ 20 ರೂ. ಟೀಗೆ ನೀವು 22.40 ರೂ. ಪಾವತಿಸಬೇಕಾಗುತ್ತದೆ. ಹಾಗಂತ ಎಲ್ಲಾ ಕಡೆ ಇದೇ ದರವೇ ಜಾರಿಯಾಗುತ್ತದೆ ಎಂದೇನಿಲ್ಲ.
Advertisement
Advertisement
Advertisement
ಎಲ್ಲಾ ವಹಿವಾಟುಗಳಿಗೂ ಒಂದು ನಿಗದಿತ ಮಿತಿ ಹಾಕಿರುತ್ತಾರೆ. ಈ ಮಿತಿ ದಾಟಿದರೆ ದರ ಮತ್ತಷ್ಟು ಏರಿಕೆಯಾಗುತ್ತದೆ.
Advertisement
ಇದನ್ನೂ ಓದಿ: ಜಿಎಸ್‍ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ
ಬೆಂಗಳೂರಿನ ಮಾವಳ್ಳಿ ಟಿಫಿನ್ ರೂಂನಲ್ಲಿ ಈಗ ನೀವು 1 ಕಾಫಿ ಕುಡಿಯಬೇಕಾದರೆ 38 ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿ ಸಿ.ಜಿ.ಎಸ್.ಟಿ (ಕೇಂದ್ರ ಜಿ.ಎಸ್.ಟಿ) ಹಾಗೂ ಎಸ್.ಜಿ.ಎಸ್.ಟಿ (ರಾಜ್ಯ ಜಿ.ಎಸ್.ಟಿ) ಎಂದು ಪ್ರತ್ಯೇಕವಾಗಿ 9% ಟ್ಯಾಕ್ಸ್ ಹಾಕ್ತಾರೆ. ಅರ್ಥಾತ್ ಒಂದು ಕಾಫಿ ಕುಡಿಯುವಾಗ ನೀವೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ತಲಾ 2.90 ರೂ. ಪಾವತಿಸಬೇಕಾಗುತ್ತದೆ.
ಯಾವ ತಿಂಡಿಗೆ ಎಷ್ಟೆಷ್ಟು ಏರಿಕೆ?: 10ರಿಂದ 12 ರೂ ಇದ್ದ ಕಾಫಿ ಟೀ ದರ 11-14, 25 – 30 ರೂ. ಇದ್ದ ಇಡ್ಲಿ ದರ 27-32 ರೂ, 15 ರೂ. ಇದ್ದ ವಡೆಗೆ 19 ರೂ., 35 – 40 ರೂ. ಇದ್ದ ಮಸಾಲೆ ದೋಸೆ 38- 43 ರೂ., 30 ರೂ. ಇದ್ದ ಸೆಟ್ ದೋಸೆ 34 ರೂ., 35 ರೂ ಇದ್ದ ಪಲಾವ್ 39 ರೂ.. 40 ರೂ. ಇದ್ದ ಚೌಚೌ ಬಾತ್ 45 ರೂ., 60 ರೂಪಾಯಿ ಇದ್ದ ಸೌತ್ ಇಂಡಿಯನ್ ಊಟ ಮಾಡಬೇಕಾದರೆ ನೀವೀಗ 77 ರೂ. ಪಾವತಿಸಬೇಕಾಗಿದೆ. ಹೋಟೆಲ್ ಗಳಲ್ಲಿ ಸಿಗುವ ಎಲ್ಲಾ ದೋಸೆಗಳಿಗೂ ಸಾಮಾನ್ಯ ಮೂರರಿಂದ ನಾಲ್ಕು ರೂ ಏರಿಕೆಯಾಗಿದ್ದರೆ ಊಟದ ದರ ಮಾತ್ರ ಐದು ರೂ ಏರಿಕೆಯಾಗಿದೆ. ಇನ್ನು ಕೆಲವು ಹೋಟೆಲ್ ಗಳಲ್ಲಿ ಎಸಿ ಕೊಠಡಿಯಲ್ಲಿ ಕೂತು ನೀವು ತಿಂಡಿ ತಿನ್ನಬೇಕಾದರೆ 18 ರೂ. ಹೆಚ್ಚು ಪಾವತಿಸಬೇಕಾಗುತ್ತದೆ.