ಉಕ್ರೇನ್‌ನಲ್ಲಿ ಕದನ ವಿರಾಮ, ರಾಜತಾಂತ್ರಿಕತೆ ಮಾರ್ಗ ಕಂಡುಕೊಳ್ಳಬೇಕಿದೆ – ಜಿ20 ಶೃಂಗಸಭೆಯಲ್ಲಿ ಮೋದಿ ಮಾತು

Public TV
1 Min Read
G20 modi

ಜಕಾರ್ತ: ಉಕ್ರೇನ್‌ನಲ್ಲಿ (Ukraine) ಕದನ ವಿರಾಮ ಹಾದಿಗೆ ಮರಳಲು ನಾವು ಮಾರ್ಗವೊಂದನ್ನು ಕಂಡುಕೊಳ್ಳಬೇಕಿದೆ ಎಂದು ಜಿ20 ಶೃಂಗಸಭೆಯಲ್ಲಿ (G20 Summit) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪುನರುಚ್ಛರಿಸಿದ್ದಾರೆ.

ಆಹಾರ ಮತ್ತು ಇಂಧನ ಭದ್ರತೆ ಕುರಿತು ಜಿ20 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉಕ್ರೇನ್‌ನಲ್ಲಿ ಕದನ ವಿರಾಮ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಭಾರತ ಮೂಲದ ಬಾಲಕಿಯ ಅಪಹರಣ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಪ್ರತಿಭಟನೆ

Russia Ukraine War 2 2

ಕಳೆದ ಶತಮಾನದಲ್ಲಿ 2ನೇ ಮಹಾಯುದ್ಧವು ಜಗತ್ತಿನಲ್ಲಿ ವಿನಾಶವನ್ನುಂಟು ಮಾಡಿತು. ಅದರ ನಂತರ ಅಂದಿನ ನಾಯಕರು ಶಾಂತಿಯ ಹಾದಿಯನ್ನು ಹಿಡಿಯಲು ಗಂಭೀರ ಪ್ರಯತ್ನ ಮಾಡಿದರು. ಈಗ ಕೋವಿಡ್ ನಂತರದ ಅವಧಿಗೆ ವಿಶ್ವಕ್ಕೆ ಹೊಸ ಕ್ರಮವನ್ನು ರಚಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಜಗತ್ತಿನಲ್ಲಿ ಶಾಂತಿ, ಸಾಮರಸ್ಯ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕವಾಗಿ ಸಂಕಲ್ಪ ಹೊಂದುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಹವಾಮಾನ ಬದಲಾವಣೆ, ಕೋವಿಡ್ ಸಾಂಕ್ರಾಮಿಕ, ಉಕ್ರೇನ್‌ನಲ್ಲಿನ ಬೆಳವಣಿಗೆಗಳು ಮತ್ತು ಅದಕ್ಕೆ ಸಂಬಂಧಿಸಿದ ಜಾಗತಿಕ ಸಮಸ್ಯೆಗಳು ಜಗತ್ತಿನಲ್ಲಿ ವಿನಾಶವನ್ನು ಸೃಷ್ಟಿಸಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

ಭಾರತದಲ್ಲಿ ಸುಸ್ಥಿರ ಆಹಾರ ಭದ್ರತೆಗಾಗಿ ನಾವು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ. ರಾಗಿಯಂತಹ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಆಹಾರ ಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸುತ್ತಿದ್ದೇವೆ. ರಾಗಿ ಜಾಗತಿಕ ಅಪೌಷ್ಟಿಕತೆ ಮತ್ತು ಹಸಿವನ್ನು ಸಹ ಪರಿಹರಿಸಬಲ್ಲದು. ನಾವೆಲ್ಲರೂ ಮುಂದಿನ ಬಾರಿ ಅಂತರರಾಷ್ಟ್ರೀಯ ರಾಗಿ ವರ್ಷವನ್ನು ಅತ್ಯಂತ ಉತ್ಸಾಹದಿಂದ ಆಚರಿಸಬೇಕು ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *