ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ವನಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಸೋನಿಯಾ ಅವರು ತೆಗೆದುಕೊಳ್ಳುವ ಯಾವ ನಿರ್ಧಾರಕ್ಕೂ ನಾನು ಬದ್ಧನಾಗಿದ್ದೇನೆ. ನನ್ನ ಕಾಳಜಿ ಏನೇಂಬುದನ್ನು ಇಆಗಾಗಲೇ ಹೈಕಮಾಂಡ್ ಗೆ ತಿಳಿಸಿದ್ದೇನೆ. ಹೀಗಾಗಿ ಪಕ್ಷದ ಅಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಗಳು ಪಂಜಾಬ್ ಹಿತಾಸಕ್ತಿಗೆ ಪೂರಕವಾಗಲಿದೆ ಎಂದು ಸಿಧು ತಿಳಿಸಿದ್ದಾರೆ. ಇತ್ತ ಹರೀಶ್ ರಾವತ್ ಅವರು, ಪಂಜಾಬ್ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ಹಾಗೂ ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ ಸಿಧುಗೆ ಸೂಚಿಸಲಾಗಿದೆ ಎಂದು ಹೇಳಿದರು.
Advertisement
Delhi | Navjot Singh Sidhu, President, Punjab Congress arrives at the AICC office, to discuss organisational matters pertaining to Punjab Congress pic.twitter.com/QmUkBEZFn2
— ANI (@ANI) October 14, 2021
Advertisement
ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ಚರಣ್‍ಜಿತ್ ಸಿಂಗ್ ಅವರನ್ನು ನೇಮಕ ಮಾಡಿದ ಬಳಿಕ ಅಲ್ಲಿನ ರಾಜಕೀಯದಲ್ಲಿ ಕೋಲಾಹಲವೇ ಎಬ್ಬಿತ್ತು. ಈ ಸಂಬಂಧ ಪಕ್ಷದ ನಿರ್ಧಾರಗಳಿಂದ ಬಂಡಾಯವೆದ್ದಿದ್ದ ಸಿಧು ಇತ್ತೀಚೆಗೆ ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೂಡ ನೀಡಿದ್ದರು. ಆದರೆ ಕೈಮಾಂಡ್ ಮಾತ್ರ ಸಿಧು ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ. ಇದನ್ನೂ ಓದಿ: ಮತ್ತೆ ಸರ್ಜಿಕಲ್ ಸ್ಟ್ರೈಕ್? – ಪಾಕಿಸ್ತಾನಕ್ಕೆ ಅಮಿತ್ ಶಾ ಎಚ್ಚರಿಕೆ
Advertisement
AICC in-charge of Punjab, Harish Rawat arrives at Congress office in Delhi
Navjot Singh Sidhu and Charanjit Channi have spoken on some issues, a solution will emerge…there are some things that take time, he says. pic.twitter.com/YANts2Vcgq
— ANI (@ANI) October 14, 2021
Advertisement
ಗುರುವಾರ ಸಿಧು ಅವರು ನವದೆಹಲಿಗೆ ತೆರಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ಪಂಜಾಬ್ ಉಸ್ತುವಾರಿ ಸಚಿವ ಹರೀಶ್ ರಾವತ್ ಅವರನ್ನು ಭೇಟಿಯಾಗಿ ಕೆಲ ಕಾಲ ಚರ್ಚೆ ನಡೆಸಿದ್ದರು. ಇದನ್ನೂ ಓದಿ: #Surgicalstrike2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್
I expressed my concerns regarding Punjab &Punjab Congress to party high-command. I've full faith in Congress pres, Priyanka ji & Rahul ji. Whatever decision they'll take, it'll for the betterment of Congress & Punjab. I'll follow their directions: Navjot S Sidhu, Punjab Cong Pres pic.twitter.com/ZZTwxCwQVO
— ANI (@ANI) October 14, 2021