ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಜುಲೈ 12ರಂದು 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂಭ್ರಮ ಡಬಲ್ ಮಾಡಲು ಈ ವರ್ಷವೂ ಕೂಡ ಶಿವಣ್ಣ ಜೊತೆ ಹುಟ್ಟುಹಬ್ಬ (Birthday) ಸೆಲೆಬ್ರೇಟ್ ಮಾಡಲು ಕಾತರದಿಂದ ಕಾಯ್ತಿದ್ದ ಫ್ಯಾನ್ಸ್‌ಗೆ ಈಗ ಬ್ಯಾಡ್ ನ್ಯೂಸ್ ಸಿಕ್ಕಿದೆ. ಈ ವರ್ಷ ಶಿವಣ್ಣ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ಪ್ರಕರಣ: ಆರೋಪಿ ಸ್ಥಾನದಲ್ಲಿರುವವರಿಗೆ ನಾವು ಸಪೋರ್ಟ್ ಮಾಡಿಲ್ಲ- ಡಾಲಿ
View this post on Instagram
ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹ್ಯಾಂಡ್ ಶೇಕ್, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ ಎಂದಿದ್ದಾರೆ ಶಿವಣ್ಣ. ಈ ವರ್ಷ ಬರ್ತ್‌ಡೇಗೆ ನಿಮ್ಮ ಜೊತೆ ಇರೋದಿಕ್ಕೆ ಆಗೊದಿಲ್ಲ. ಆದರೆ ಈ ವರ್ಷವಿಡೀ ಒಟ್ಟಿಗೆ ಪ್ರತಿದಿನ ಸೆಲೆಬ್ರೇಟ್ ಮಾಡೋಣ ಎಂದು ಶಿವಣ್ಣ ಮನವಿ ಮಾಡಿದ್ದಾರೆ. ನಾನು ಬರ್ತ್‌ಡೇಗೆ ಇಲ್ಲದೇ ಇದ್ದರೂ ನಿಮ್ಮ ಜೊತೆ ರಣಗಲ್ ಇರುತ್ತಾನೆ ಎಂದು ಶಿವಣ್ಣ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.
ಅಂದಹಾಗೆ, ಗೀತಾ ಶಿವರಾಜ್‌ಕುಮಾರ್ ನಿರ್ಮಾಣದ ‘ಭೈರತಿ ರಣಗಲ್’ (Bhairathi Rangal) ಸಿನಿಮಾದ ಟೀಸರ್ ಜು.12ರಂದು ಬೆಳಗ್ಗೆ 10 ಗಂಟೆ 10 ನಿಮಷಕ್ಕೆ ಬಿಡುಗಡೆಯಾಗಲಿದೆ. ಶಿವಣ್ಣ ಲಾಯರ್ ಆಗಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ನರ್ತನ್ ನಿರ್ದೇಶನದಲ್ಲಿ ಶಿವಣ್ಣ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದಾರೆ.