Bengaluru CityCinemaKarnatakaLatestMain PostSandalwood
ದೊಡ್ಮನೆಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪು ಅಂತ ಹೆಸರಿಟ್ಟ ಶಿವಣ್ಣ

ಕರುನಾಡ ರಾಜಕುಮಾರ ಪುನೀತ್‌ಗಾಗಿ ಇಂದಿಗೂ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಅಪ್ಪು ಅಗಲಿಕೆ ಈಗಲೂ ಫ್ಯಾನ್ಸ್ಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಶಿವಣ್ಣ ಅವರಲ್ಲಿ ಅಪ್ಪು ಅವರನ್ನ ಕಾಣ್ತಿದ್ದಾರೆ. ದೂರದ ಬೀದರ್‌ನಿಂದ ಬಂದ ಅಭಿಮಾನಿ ದಂಪತಿಯ ಪುತ್ರನಿಗೆ ಅಪ್ಪು ಹೆಸರಿಟ್ಟು ಶಿವಣ್ಣ ನಾಮಕರಣ ಮಾಡಿದ್ದಾರೆ.
ಅಪ್ಪು ಅಗಲಿ ಇದೀಗ 10 ತಿಂಗಳಾಗಿದೆ. ಶಿವಣ್ಣ ಅವರಲ್ಲಿ ಅಪ್ಪುನ ನೋಡಿ ಖುಷಿಪಡ್ತಿದ್ದಾರೆ. ಹೀಗಿರುವಾಗ ಶಿವಣ್ಣ ಅವರ ಕುಟುಂಬದ ಅಭಿಮಾನಿಯೊಬ್ಬರು ದೊಡ್ಮನೆಗೆ ಬಂದು ಶಿವಣ್ಣಗೆ ಭೇಟಿ ಕೊಟ್ಟಿದ್ದಾರೆ. ಇದೀಗ ಮನೆಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪು ಅಂತಾ ಶಿವಣ್ಣ ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್‌ನಲ್ಲಿ ಲೈಟ್ ಆಫ್ ಆದ್ಮೇಲೆ ನಡೆಯೋದೆ ಬೇರೆ!
ಬೀದರ್‌ನಿಂದ ಬೆಂಗಳೂರಿಗೆ ಆಗಮಿಸಿದ ಅಭಿಮಾನಿ ದಂಪತಿಯ ಮಗುವಿಗೆ ಅಪ್ಪು ಅಂತಾ ನಾಮಕರಣ ಮಾಡಿ, ದಂಪತಿಗೆ ಆತಿಥ್ಯ ನೀಡಿದ್ದಾರೆ. ಇದೀಗ ಶಿವಣ್ಣ ಅವರ ನಡೆ ನೋಡಿ ಫ್ಯಾನ್ಸ್ ಕೂಡ ಶುಭ ಹಾರೈಸಿದ್ದಾರೆ.