ಬೆಂಗಳೂರು: ರೇಡ್ ಆಗುತ್ತಿದ್ದಾಗ ಸ್ವಲ್ಪ ಬೇಜಾರ್ ಆಗುತ್ತಿತ್ತು, ಇರಿಟೇಟ್ ಆದರೂ ಸಹಕಾರ ನೀಡಬೇಕಿತ್ತು ಎಂದು ಐಟಿ ದಾಳಿಯ ಬಗ್ಗೆ ಶಿವರಾಜ್‍ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಐಟಿ ರೇಡ್ ದಾಳಿ ನಂತರ ಮೊದಲ ಬಾರಿಗೆ ಮಾತನಾಡಿದ ಅವರು, “ಐಟಿ ರೇಡ್ ಆಗಿರುವ ಕಾರಣ ನನಗೆ ಗೊತ್ತಿಲ್ಲ. ಮೊದಲ ಬಾರಿ ನನ್ನ ಮನೆ ಮೇಲೆ ರೇಡ್ ಆಗಿದೆ. 84-85 ನಲ್ಲಿ ಚೆನ್ನೈ ನಲ್ಲಿದ್ದಾಗ ಒಮ್ಮೆ ರೇಡ್ ಆಗಿತ್ತು. ಆಗ ನಾನು ಅಲ್ಲಿ ಇನ್ಸ್ಟಿಟ್ಯೂಟ್ ನಲ್ಲಿ ಓದುತ್ತಿದ್ದೆ. ರೇಡ್ ಆಗುತ್ತಿರುವಾಗ ಸ್ವಲ್ಪ ಬೇಜಾರ್ ಆಗುತ್ತಿತ್ತು. ಇರಿಟೇಟ್ ಆದರೂ ಸಹಕಾರ ನೀಡಬೇಕಿತ್ತು” ಎಂದು ಹೇಳಿದರು. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ
Advertisement
Advertisement
ಹೈ ಬಜೆಟ್ ಚಿತ್ರಗಳ ವಿಚಾರಕ್ಕೆ ಮಾತನಾಡಿದ ಅವರು ಐಟಿ ಪೇಪರ್ ಎಲ್ಲಾ ಸರಿ ಇರತ್ತೆ. ಲೇಟ್ ಆದರೂ ಎಕ್ಟ್ರಾ ಕಟ್ಟಿರ್ತೀವಿ. ಪ್ರೊಡಕ್ಷನ್ ಖರ್ಚುಗಳು, ಹೊರದೇಶಗಳಿಗೆ ಹೋದ ಖರ್ಚುಗಳೂ ಇರುತ್ತೆ. ಹೈ ಬಜೆಟ್ ಚಿತ್ರ ಅಂದರೆ ಸಂಭಾವನೆ ಇಷ್ಟು ಅಂತ ಇರುತ್ತೆ. ಟಗರು, ವಿಲನ್, ಕೆಜಿಎಫ್, ಈಗ ನಟಸಾರ್ವಭೌಮ, ಕವಚ ಸಿನಿಮಾ ಬರುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: 20ಕೆಜಿ ಬೆಳ್ಳಿ, 450ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ- ಯಶ್ ಮನೆಯಲ್ಲಿ ಪತ್ತೆ..?
Advertisement
Advertisement
ಎರಡು ದಿನ ವಾಕಿಂಗ್ ಹೋಗಿರಲಿಲ್ಲ. ನಾನು ಹಾಗೂ ಗೀತಾ ಡ್ರೈವ್ ಹೋಗುತ್ತೇವೆ. ಇಲ್ಲ ಅಂದರೆ ಸಿನಿಮಾಗೆ ಹೋಗುತ್ತಿದ್ದೀವಿ. ಮನೆ ತುಂಬ ದೊಡ್ಡದು ಇದ್ದ ಕಾರಣ ಹುಡುಕಲು ಸಮಯ ಹಿಡಿಯಿತು. ಸ್ವಲ್ಪ ಡಾಕ್ಯುಮೆಂಟ್ ತಗೆದುಕೊಂಡು ಹೋಗಿದ್ದಾರೆ. ಮತ್ತೆ ವಿಚಾರಣೆಗೆ ಕರೆದರೆ ಹೋಗುತ್ತೇನೆ ಅಂದರು. ಇದನ್ನೂ ಓದಿ: ಸುದೀಪ್ ಮನೆಯಲ್ಲಿ ಐಟಿ ರೇಡ್ ಅಂತ್ಯ- ಬೆಳಗ್ಗೆ ತೆರಳಿದ ಬಳಿಕ ಮತ್ತೆ ಅಧಿಕಾರಿಗಳು ಆಗಮಿಸಿದ್ದು ಯಾಕೆ?
ಗೀತಾ ಎಲೆಕ್ಷನ್ ಗೆ ನಿಂತಿದ್ದರಿಂದ ಅವರನ್ನು ಕೂಡ ವಿಚಾರಣೆ ಮಾಡಿದ್ದಾರೆ. ರೇಡ್ ಅಂದ ತಕ್ಷಣ ಅಭಿಮಾನಿಗಳಿಗೆ ಆತಂಕ ಇರತ್ತೆ. ಬೆಳಗ್ಗೆ ಮಲಗಿದಾಗ 5 ಗಂಟೆ ಆಗಿತ್ತು ಯಾರ ಬಳಿಯೂ ಮಾತಾಡಿಲ್ಲ ಎಂದು ಶಿವರಾಜ್‍ಕುಮಾರ್ ತಿಳಿಸಿದರು.