ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಪತ್ನಿ ಗೀತಾ ಹಾಗೂ ಮಧು ಬಂಗಾರಪ್ಪ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ದೇವೇಗೌಡರಿಗೆ ಸ್ನಾಯು ಸೆಳೆತವಾಗಿ ಕಾಲು ನೋವು ಕಾಣಿಸಿಕೊಂಡಿತ್ತು. ಕಾಲು ಉದಿಕೊಂಡ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ದಂಪತಿ, ಮಧು ಬಂಗಾರಪ್ಪ ಭೇಟಿ ನೀಡಿ ಪದ್ಮನಾಭ ನಗರದ ನಿವಾಸಕ್ಕೆ ಆಗಮಿಸಿ ದೇವೇಗೌಡರ ಜೊತೆ ಮಾತನಾಡಿದ್ದಾರೆ.
ದೆಹಲಿಯಿಂದ ಶುಕ್ರವಾರವಷ್ಟೇ ವಾಪಾಸ್ಸಾಗಿದ್ದ ದೇವೇಗೌಡರಿಗೆ ಶನಿವಾರ ಸ್ನಾಯು ಸೆಳೆತವಾಗಿ ಕಾಲು ನೋವು ಕಾಣಿಸಿಕೊಂಡಿತ್ತು. ಶನಿವಾರ ಬೆಳಗ್ಗೆ ಕೊಠಡಿ ಬಳಿ ದೇವೇಗೌಡರು ಹೋಗುತ್ತಿದ್ದ ವೇಳೆ ಕಾಲು ಎಡವಿದ್ದರಿಂದ ಅವರ ಕಾಲಿಗೆ ಏಟಾಗಿದ್ದು, ಕಾಲು ಊದಿಕೊಂಡಿತ್ತು. ಕಾಲು ನೋವಿನ ನಡುವೆಯೂ ಜನರಿಗೆ ಬೇಸರ ಆಗಬಾರದೆಂದು ತಮ್ಮ ನಿವಾಸಕ್ಕೆ ಬಂದಿರುವ ಜನರ ಸಮಸ್ಯೆಯನ್ನು ಆಲಿಸುತ್ತಿದ್ದರು.
ಕಾಲಿನ ನೋವು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಪ್ರಧಾನಿ ದೇವೇಗೌಡ ಅವರು ದೆಹಲಿಗೆ ತೆರಳಲಿದ್ದಾರೆ. ನಾಳೆ ಸಂಸತ್‍ನ ಅಧಿವೇಶನದಲ್ಲಿ ದೇವೇಗೌಡರು ಬಜೆಟ್ ಕುರಿತ ಚರ್ಚೆಯಲ್ಲಿ ಭಾಷಣ ಮಾಡುವ ಸಾಧ್ಯತೆಯಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv