ಬೆಂಗಳೂರು: ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಿದ್ದಾರೆ.
ನಟ ಶಿವರಾಜ್‍ಕುಮಾರ್ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಶಿವಣ್ಣ ಸಿಎಂ ಪರಿಹಾರ ನಿಧಿಗೆ 10 ಲಕ್ಷ ಚೆಕ್ ಕೂಡ ನೀಡಿದರು. ಅಲ್ಲದೇ ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡರು.
Advertisement
ನಟ ಶಿವರಾಜಕುಮಾರ್ 10 ಲಕ್ಷ ರೂ ಹಾಗೂ ರಾಜ್ಯ ಸಭಾ ಸದಸ್ಯ ಕುಪೇಂದ್ರ ರೆಡ್ಡಿ ರೂ 25 ಲಕ್ಷ ರೂಗಳನ್ನು ಮಡಿಕೇರಿ ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರವಾಗಿ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು . #drshivrajkumar#KodaguFloods #KarnatakaRains pic.twitter.com/7f6zdqI7x4
— CM of Karnataka (@CMofKarnataka) August 20, 2018
Advertisement
ಇದೇ ವೇಳೆ ಮಾತನಾಡಿದ ಶಿವರಾಜ್‍ಕುಮಾರ್, ಕರ್ನಾಟಕ ಒಂದೇ. ಯಾರದ್ದೇ ಕಷ್ಟ ಇದ್ದರು ನಾವು ಸ್ಪಂಧಿಸಬೇಕು. ಮಂಗಳೂರು, ಕೊಡಗು, ಉತ್ತರ ಕರ್ನಾಟಕ ಅಂತ ಇಲ್ಲ. ಅಖಂಡ ಕರ್ನಾಟಕ ನಮ್ಮದು. ಯಾರದ್ದೇ ಕಷ್ಟ ಆದ್ರು ನಾವು ಸಹಾಯ ಮಾಡಬೇಕು. ಎಲ್ಲಾ ಜನರು ಕೈಲಾದಷ್ಟು ಸಹಾಯ ಮಾಡಿ. ಅಭಿಮಾನಿಗಳು, ನಟರು, ಜನರು ಸಹಾಯ ಮಾಡುವಂತೆ ಶಿವಣ್ಣ ಮನವಿ ಮಾಡಿಕೊಂಡರು.
Advertisement
Advertisement
ನಿರ್ದೇಶಕ ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ರಾಜ್‍ಕುಮಾರ್ ಭಾಗಿಯಾಗಿದ್ದರು. ಇದೇ ವೇಳೆ ಕೊಡಗಿನಲ್ಲಿ ಸಂಭವಿಸಿರುವ ಪ್ರವಾಹದ ಪರಿಸ್ಥಿತಿ ಬಗ್ಗೆ ಮಾತನಾಡಿ, ಕೊಡಗಿನ ಜನತೆಗೆ ನನ್ನ ಕೈಲಾದಷ್ಟು ನಾನು ಸಹಾಯ ಮಾಡಿದ್ದೇನೆ. ಎಲ್ಲರೂ ಅವರ ಶಕ್ತಿಯಾನುಸಾರ ಸಹಾಯ ಮಾಡಬೇಕು. ಸಂತ್ರಸ್ತ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv