ಲಕ್ನೋ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ (Hathras) ಘನಘೊರ ಘಟನೆಯೊಂದು ನಡೆದಿದೆ. ಇಲ್ಲಿನ ರಸ್‌ಗವಾನ್‌ನಲ್ಲಿರುವ ಡಿ.ಎಲ್ ಪಬ್ಲಿಕ್ ಶಾಲೆಯ ಯಶಸ್ಸಿಗಾಗಿ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸೇರಿಕೊಂಡು 11 ವರ್ಷದ ಬಾಲಕನನ್ನು ನರಬಲಿ (Human Sacrificed) ಕೊಟ್ಟಿದೆ. ವಾರದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೂಢನಂಬಿಕೆ ಆಚರಣೆಗಳಲ್ಲಿ ನಂಬಿಕೆಯುಳ್ಳ ಶಾಲೆಯ ಮಾಲೀಕ ಜಸೋಧನ್ ಸಿಂಗ್, ತನ್ನ ಕುಟುಂಬ ಮತ್ತು ಶಾಲೆಯ ಅಭ್ಯುದಯಕ್ಕಾಗಿ ಮಗುವನ್ನು ತ್ಯಾಗ ಮಾಡುವಂತೆ ಕೇಳಿಕೊಂಡಿದ್ದರು. ಇದಾದ ಕೆಲ ದಿನಗಳಲ್ಲಿ ಅಂದ್ರೆ ಇದೇ ಸೆ.23ರಂದು ತಂದೆ-ಮಗ ಇಬ್ಬರು ಇತರ ಮೂವರು ಸಿಬ್ಬಂದಿಯೊಂದಿಗೆ ಸಂತ್ರಸ್ತ ಬಾಲಕನ್ನು ಶಾಲೆಯ ಹಾಸ್ಟೆಲ್‌ನಿಂದ ಕಿಡ್ನ್ಯಾಪ್ ಮಾಡಿ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಬಾಲಕ ಎಚ್ಚರಗೊಂಡು ಚೀರಾಡಲು ಪ್ರಾರಂಭಿಸಿದ್ದಾನೆ, ಬಳಿಕ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹತ್ರಾಸ್‌ನ ಹೆಚ್ಚುವರಿ ಎಎಸ್‌ಪಿ ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ವಿರುದ್ಧ ದೂರು ದಾಖಲಿಸಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಕೇಸ್ – RTI ಕಾರ್ಯಕರ್ತ ಸ್ಪಷ್ಟನೆ
ಪೊಲೀಸರು (Uttar Pradesh) ಪ್ರಕಾರ, ಆರೋಪಿಗಳು ತಮ್ಮ ಮಗನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಬಘೇಲ್ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯತ್ತಿದ್ದಾರೆ ಎಂದು ಆತನ ಪೋಷಕರಿಗೆ ತಿಳಿಸಿದ್ದರು. ಇದರಿಂದ ಅನುಮಾನಗೋಂಡ ಪೋಷಕರು ರಸ್ತೆ ಮಧ್ಯೆ ಕಾರು ನಿಲ್ಲಿಸಿ ನೋಡಿದಾಗ ಮಗು ಸತ್ತಿರುವ ವಿಷಯ ತಿಳಿಯಿತು. ಕೂಡಲೇ ಮೃತ ಬಾಲಕನ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ
ಐವರು ಅರೆಸ್ಟ್:
ನರಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮಾಲೀಕ ಜಸೋಧನ್ ಸಿಂಗ್, ಆತನ ಮಗ ನಿರ್ದೇಶಕ ದಿನೇಶ್ ಬಾಘೇಲ್, ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್ ಮತ್ತು ಇತರ ಇಬ್ಬರು ಶಿಕ್ಷಕರಾದ ರಾಮಪ್ರಕಾಶ್ ಸೋಲಂಕಿ ಮತ್ತು ವೀರಪಾಲ್ ಸಿಂಗ್ ಸೇರಿ ಐವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNSS) ಸೆಕ್ಷನ್ 103 (1) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಪ್ರಯಾಣಿಕರಿದ್ದ ವಿಮಾನ ಟೇಕಾಫ್ ಆಗ್ತಿದ್ದಂತೆಯೇ ಸೆಕ್ಸ್ ಶುರು ಹಚ್ಕೊಂಡ ಜೋಡಿಗೆ ಕೋರ್ಟ್ ಶಿಕ್ಷೆ