ಲಕ್ನೋ: ಉತ್ತರ ಪ್ರದೇಶದ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರು ಜನಸಮೂಹವಿದ್ದ ಸ್ಥಳದಿಂದ ಗರ್ಭಿಣಿಯನ್ನು ಹೊತ್ತು, ಆಸ್ಪತ್ರೆಗೆ ದಾಖಲಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಕಾರಣವಾಗಿದೆ.
ರೈಲ್ವೇ ಪೊಲೀಸ್ ಸೋನು ಕುಮಾರ್ ರಾಜೋರಾ ಇಂತಹ ಮಾನವೀಯತೆ ಮೆರೆದ ಅಧಿಕಾರಿ. ಸರಿಯಾದ ಸಮಯದಲ್ಲಿಯೇ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ ಹಿರೋ ಎನಿಸಿಕೊಂಡಿದ್ದಾರೆ.
Advertisement
ನಡೆದದ್ದು ಏನು?
ಶುಕ್ರವಾರ ಮಥುರಾ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಭಾವನಾ ಎಂಬವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಇದನ್ನು ನೋಡಿದ ಸೋನು ಕುಮಾರ್ ಅವರು ಅಂಬುಲೆನ್ಸ್‍ಗೆ ಕರೆ ಮಾಡಿ ತಕ್ಷಣವೇ ನಿಲ್ದಾಣಕ್ಕೆ ಬರುವಂತೆ ಹೇಳಿದ್ದಾರೆ. ಆದರೆ ಅಂಬುಲೆನ್ಸ್ ಬರುವುದು ತಡವಾಗುತ್ತದೆ ಎಂದು ಗೊತ್ತಾಗುತ್ತಿದ್ದು, ಗರ್ಭಿಣಿಯನ್ನು ಹೊತ್ತುಕೊಂಡೇ 100 ಮೀ. ಸಮೀಪದಲ್ಲಿದ್ದ ಆಸ್ಪತ್ರೆಗೆ ಹೆಜ್ಜೆ ಹಾಕಿದ್ದಾರೆ.
Advertisement
ಆಸ್ಪತ್ರೆಗೆ ಸೇರುತ್ತಿದ ಸ್ವಲ್ಪ ಸಮಯಲ್ಲಿ ಹೆರಿಗೆಯಾಗಿದ್ದು, ಭಾವನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಸೋನು ಕುಮಾರ್ ನಿಸ್ವಾರ್ಥ ಸೇವೆಗೆ ಎಲ್ಲೆಡೆ ಅಭಿನಂದನೆ ವ್ಯಕ್ತವಾಗಿದೆ.
Advertisement
Advertisement
ನನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸುವುದು ಸ್ವಲ್ಪ ತಡವಾಗಿದ್ದರೂ ಆಕೆ ಮತ್ತು ಮಗು ಪ್ರಾಣಕ್ಕೆ ಅಪಾಯ ಇತ್ತು ಅಂತಾ ವೈದ್ಯರು ಹೇಳಿದ್ದರು ಎಂದು ಭಾವನಾ ಪತಿ ಮಹೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತೊಬ್ಬರಿಗೆ ಸಹಾಯ ಮಾಡುವುದು ನನ್ನ ಕೆಲಸ. ಗರ್ಭಿಣಿಯನ್ನು ನೋಡುತ್ತಿದ್ದಂತೆ 108 ಹಾಗೂ 102 ನಂಬರ್ ಗೆ ಕರೆ ಮಾಡಿದ್ದೆ. ಭಾವನಾ ಹಾಗೂ ಅವರ ಪತಿ ನಗರಕ್ಕೆ ಹೊಸಬರಾಗಿದ್ದು, ಹೇಗೆ ಹೋಗುವುದು ಎಂದು ತಿಳಿದಿರಲಿಲ್ಲ. ಹೀಗಾಗಿ ನಾನೇ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಿದೆ ಎಂದು ಸೋನು ಕುಮಾರ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Mathura: Policeman carried pregnant woman in arms to help her reach hospital. SO Hathras City says, “I saw woman was in pain&her husband was asking people for help. I called for ambulance, but it wasn’t available. So I took her to hospital where she gave birth to a baby.” (14.09) pic.twitter.com/4XshUKFsil
— ANI UP/Uttarakhand (@ANINewsUP) September 15, 2018