– ಕಟ್ಟಡ ಕಾಮಗಾರಿಗೆ ಬ್ರೇಕ್ ಹಾಕಿದ ಕಾಂಗ್ರೆಸ್ ಸರ್ಕಾರ
ಬಳ್ಳಾರಿ: ಗಣಿನಾಡು ಬಳ್ಳಾರಿ (Bellary) ಯಲ್ಲಿ ಬಿಜೆಪಿ (BJP) ಧೂಳಿಪಟವಾಗಿ ಕಾಂಗ್ರೆಸ್ (Congress) ಭರ್ಜರಿ ಜಯಗಳಿಸಿದೆ. ಈ ಹಿಂದೆ ಇದ್ದ ಬಿಜೆಪಿ ನಾಯಕರು ಚುನಾವಣೆಯಲ್ಲಿ ಹೀನಾಯವಾಗಿ ಸೋತು ಮನೆ ಸೇರಿದ್ದಾರೆ. ಆದರೆ ಅದೊಂದು ಕಟ್ಟಡ ಇಬ್ಬರು ಪ್ರತಿಷ್ಠೆಯಾಗಿ ತೆಗೆದುಕೊಂಡ ಹಾಗೆ ಕಾಣುತ್ತದೆ.
Advertisement
ಹೌದು. ಬಳ್ಳಾರಿಯ ಕೇಂದ್ರ ಭಾಗದಲ್ಲಿ ಬಿರುವ ಗಡಗಿ ಚೆಣಪ್ಪಾ ವೃತ್ತದಲ್ಲಿ ಬರುವ ಹಳೆಯ ಕಟ್ಟಡವನ್ನು ಬಿಜೆಪಿ ಮುಖಂಡ ಶ್ರೀರಾಮುಲು (Sriramulu) ಭಾರೀ ವಿರೋಧದ ನಡುವೆಯೂ ರಾತ್ರೋರಾತ್ರಿ ಕೆಡವಿ, ನೂತನ ಕಟ್ಟಡ ಕಟ್ಟಲು ಮುಂದಾಗಿದ್ದರು. ಸಾಕಷ್ಟು ವಿರೋಧದ ನಡುವೆಯೂ ಆ ಕಟ್ಟಡವನ್ನು ಕೆಡವಿ, ಅಲ್ಲಿ ಐಕಾನಿಕ್ ಟವರ್ (Iconic Tower) ನಿರ್ಮಾಣ ಮಾಡಲು ಸುಮಾರು 6 ಕೋಟಿ ಹಣ ಖರ್ಚು ಮಾಡಿ, ಈ ಕಟ್ಟಡ ಕಟ್ಟಲು, ಮುಂದಾಗಿದ್ದರು. ಆದರೆ ಅಂದು ವಿರೋಧ ಮಾಡಿದ್ದ ಕಾಂಗ್ರೆಸ್ ನಾಯಕರು ಇಂದು ಅವರದೇ ಸರ್ಕಾರ ಬಂದಿದೆ. ಹೀಗಾಗಿ ನಡೆಯುತ್ತಿರುವ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದನ್ನೂ ಓದಿ: ಗೃಹಜ್ಯೋತಿ ಗೊಂದಲ ಬಗೆಹರಿದ್ರೂ ಶಾಕ್- 200 ಯುನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಡಬಲ್ ಬಿಲ್
Advertisement
Advertisement
ಕಳೆದ 6 ತಿಂಗಳಿಂದ ನಡೆಯುತ್ತಿದ್ದ, ಈ ಕಾಮಗಾರಿಯನ್ನು ಈಗ ಏಕಾಏಕಿ ನಿಲ್ಲಿಸಲಾಗಿದೆ. ಸುಮಾರು 108 ಅಡಿ ಎತ್ತರದ ಗೋಪುರ ನಿರ್ಮಾಣ ಅದರ ಜೊತೆಯಲ್ಲಿ ಎರಡು ಲಿಫ್ಟ್ ಒಳಗೊಂಡ ಬಳ್ಳಾರಿಯ ಐಕಾನಿಕ್ ಗೋಪುರ ನಿರ್ಮಾಣ ಬರದಿಂದ ಸಾಗಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ಈ ಕಾಮಗಾರಿಯನ್ನು ಈಗ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ. ಕಾರಣ ನಗರದಲ್ಲಿ ಹಲವಾರು ಕಡೆಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯಿಂದ ನಿತ್ಯ ಟ್ರಾಫಿಕ್ (Traffic) ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಕಾಮಗಾರಿಯನ್ನು ಬೇಗ ಮುಗಿಸುಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
Advertisement
ಈ ಹಿಂದೆ ಇದ್ದ ಗಡಗಿ ಚೆಣಪ್ಪಾ ಬಸಪ್ಪಾ ವೃತ್ತ (Chenappa Basappa Circle) ದಲ್ಲಿ ಇದ್ದ ಗೋಪುರವನ್ನು ಅಂದಿನ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೆಡವಿ ಮತ್ತೊಂದು ಗೋಪುರ ಕಟ್ಟಿದ್ದರು. ಆದರೆ ಅದೇ ಗೋಪುರವನ್ನು ಮಾಜಿ ಸಚಿವ ಶ್ರೀರಾಮುಲು ಅವರು ಮತ್ತೊಂದು ಸಾರಿ ಕೆಡವಿ, ಹೊಸ ಗೋಪುರ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಈಗ ಕಾಂಗ್ರೆಸ್ ಸರ್ಕಾರ ಆ ಗೋಪುರ ನಿರ್ಮಾಣಕ್ಕೆ ಬ್ರೇಕ್ ಹಾಕಿದೆ. ನಾಯಕರು ವೈಯಕ್ತಿಕ ಕಾರಣಕ್ಕಾಗಿ ಅಭಿವೃದ್ಧಿ ಕಾರ್ಯಕ್ರಮಗಳು ಕುಂಠಿತ ಆಗದೇ ಇರಲಿ ಅನ್ನೋದು ಸಾರ್ವಜನಿಕರ ಆಶಯವಾಗಿದೆ.