ಬೆಂಗಳೂರು: ಈ ಮೇಲ್ ಮೂಲಕ ಸಂಸ್ಥೆಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ವಿರುದ್ಧ ಇನ್ಫೋಸಿಸ್ ಸೈಬರ್ ಕ್ರೈಂ ಪೊಲೀಸ್‍ಗೆ ದೂರು ನೀಡಿದೆ.
ಅಲ್ಪೇಶ್‍ಪಟೇಲ್ ಎಂಬಾತನ ವಿರುದ್ಧ ಇನ್ಫೋಸಿಸ್ ಸೆಪ್ಟೆಂಬರ್ 26 ರಂದು ದೂರು ನೀಡಿದೆ.
Advertisement
ಇಮೇಲ್ ನಲ್ಲಿ ಏನಿತ್ತು?
ಇನ್ಫೋಸಿಸ್ ಸಂಸ್ಥೆ ಸಮಾಜದಲ್ಲಿ ಭಯೋತ್ಪಾದನೆಯನ್ನ ಹಬ್ಬಿಸುತ್ತಿದೆ. ಹೀಗಾಗಿ ಸಂಸ್ಥೆಗೆ ಯಾವುದೇ ರೀತಿಯ ಗುತ್ತಿಗೆಗಳನ್ನು ಕೊಡದಂತೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಂದಿನ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆಯುವುದಾಗಿ ಜುಲೈ 28ರಂದು ಇನ್ಫೋಸಿಸ್ ಉದ್ಯೋಗಿಗಳಾದ ಮಣಿಕಾಂತ್, ರಂಗನಾಥ್ ದ್ವಾರಕನಾಥ್ ಮಾವಿನಕೆರೆ, ಸಂದೀಪ್ ಮಹಿಂದ್ರೊ ಅವರ ಖಾತೆಗಳಿಗೆ [email protected] ಮೂಲಕ ಬೆದರಿಕೆ ಬಂದಿತ್ತು.
Advertisement
ಪೊಲೀಸರು ಐಪಿ ಅಡ್ರೆಸ್ ಮೂಲಕ ಇಮೇಲ್ ಕಳುಹಿಸಿದ ವ್ಯಕ್ತಿಯನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಇಮೇಲ್ ಕಳುಹಿಸಿದ ವ್ಯಕ್ತಿ ಇನ್ಫಿಯ ಮಾಜಿ ಉದ್ಯೋಗಿಯಾಗಿದ್ದು, ಮೇಲಿನ ಅಧಿಕಾರಿಗಳ ಹೆಸರಿಗೆ ಕಳಂಕ ತರಲು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.