ನವದೆಹಲಿ: ಮೂರು ರಾಜ್ಯಗಳ ಜನಾದೇಶ (ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ) ಲೋಕಸಭೆಯ ಹ್ಯಾಟ್ರಿಕ್ ಗೆಲುವಿನ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆಶಯ ವ್ಯಕ್ತಪಡಿಸಿದ್ದಾರೆ.
ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಸಾಧಿಸಿದೆ. ಬಿಜೆಪಿ ಗೆಲುವಿನ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.
Advertisement
Advertisement
ಇದು ರೈತರು, ಆದಿವಾಸಿಗಳು, ಮಹಿಳೆಯರ ಗೆಲುವು. ಈ ಗೆಲುವಿನಲ್ಲಿ ಮಹಿಳೆಯರು, ಯುವಕರು ತಮ್ಮ ಗೆಲುವು ನೋಡುತ್ತಿದ್ದಾರೆ. 2047 ಭಾರತವನ್ನು ವಿಕ್ಸಿತ್ ದೇಶ ಮಾಡುವ ಗುರಿಗೆ ಶಕ್ತಿ ನೀಡಲಿದೆ. ಈ ಚುನಾವಣೆಯಲ್ಲಿ ನಾರಿ ಶಕ್ತಿ ದೊಡ್ಡದಾಗಿ ಹೊರಹೊಮ್ಮಿದೆ. ದೇಶದ ಮಹಿಳೆಯರು ಸುರಕ್ಷಾ ಕವಚವಾಗಿ ನಿಂತರೆ, ಯಾವುದೇ ಕಾರಣಕ್ಕೂ ಹಾನಿಯಾಗಲು ಬಿಡುವುದಿಲ್ಲ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗಿಯಾಗಿದ್ದಾರೆ. ನಮಗೆ ರಕ್ಷಾ ಕವಚವಾಗಿದ್ದಾರೆ ಎಂದು ಮಹಿಳೆಯರಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ.
Advertisement
ನಾನು ಇಂದು ವಿನ್ರಮವಾಗಿ ದೇಶದ ಜನರಿಗೆ ಹೇಳುತ್ತಿದ್ದೇನೆ. ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದೇವೆ. ಇದು ಮೋದಿ ಗ್ಯಾರಂಟಿ. ಗ್ಯಾರಂಟಿ ಪೂರ್ಣ ಮಾಡುವುದು ಮೋದಿ ಗ್ಯಾರಂಟಿ. ದೇಶದ ಯುವಕರು ಅಭಿವೃದ್ಧಿಯನ್ನು ಮಾತ್ರ ಕೇಳುತ್ತಾರೆ. ಇದಕ್ಕೆ ವಿರುದ್ಧವಾಗಿ ಕೆಲಸ ಮಾಡಿದವರು ಅಧಿಕಾರದಿಂದ ಹೊರಗಿದ್ದಾರೆ. ಪೇಪರ್ ಲೀಕ್ ಸೇರಿದಂತೆ ಹಲವು ಹರಗಣ ಮಾಡಿದ ಪಕ್ಷಗಳು ಅಧಿಕಾರದಿಂದ ಹೊರಗಿವೆ. ದೇಶದ ಯುವಕರಲ್ಲಿ ಬಿಜೆಪಿ ಮೇಲೆ ಭರವಸೆ ಹೆಚ್ಚಿದೆ. ನಮ್ಮ ಆಕಾಂಕ್ಷೆಗಳನ್ನು ಬಿಜೆಪಿ ಪೂರ್ಣ ಮಾಡಬಲ್ಲದು ಎಂದು ಯುವಕರು ನಂಬಿದ್ದಾರೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
Advertisement
ಆದಿವಾಸಿಗಳನ್ನು ತಾತ್ಸರ ಮಾಡಿದ ಪಕ್ಷವನ್ನು ಅವರು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಆದಿವಾದಿಗಳಿರುವ ರಾಜ್ಯದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. ಆದಿವಾಸಿ ಸಮುದಾಯದ ಅಭಿವೃದ್ಧಿ ನಿರೀಕ್ಷೆಯಲ್ಲಿದ್ದಾರೆ. ಈ ನಿರೀಕ್ಷೆಯನ್ನು ಬಿಜೆಪಿ ಪೂರ್ಣ ಮಾಡಬಲ್ಲದು ಎಂದು ನಂಬಿದ್ದಾರೆ ಎಂದು ತಿಳಿಸಿದ್ದಾರೆ.
ರಾಷ್ಟ್ರಿಯ ಅಧ್ಯಕ್ಷ ನಡ್ಡಾ ಅವರ ಕಾರ್ಯತಂತ್ರವೂ ಗೆಲವಿಗೆ ಕಾರಣ. ಈ ಚುನಾವಣೆ ಅವಧಿಯಲ್ಲಿ ನಡ್ಡಾ ಮನೆಯಲ್ಲಿ ದುರ್ಘಟನೆ ನಡೆಯಿತು. ಆದಾಗ್ಯೂ ಕಾರ್ಯಕರ್ತನಂತೆ ಕೆಲಸ ಮಾಡಿದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ವಾಪಸ್ ಬರಲ್ಲ ಎಂದು ಹೇಳಿದ್ದೆ. ನಾನು ಭವಿಷ್ಯ ನಂಬಲ್ಲ, ಆದರೆ ರಾಜಸ್ಥಾನ ಜನರ ಮೇಲೆ ನನಗೆ ವಿಶ್ವಾಸವಿತ್ತು. ಈಗ ಅದು ನಿಜವಾಗಿದೆ. ಬಿಜೆಪಿ ಮೇಲೆ ರಾಜಸ್ಥಾನದಲ್ಲಿ ಭರವಸೆ ಹೆಚ್ಚಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ಜನರಿಗೆ ನಾನು ಅಭಾರಿ. ನಿರಂತರವಾಗಿ ಬಿಜೆಪಿ ಜನಪ್ರಿಯತೆ ಹೆಚ್ಚುತ್ತಿದೆ. ಬಿಜೆಪಿ ತೆಲಂಗಾಣ ಜನರ ಸೇವೆಯಲ್ಲಿ ಲೋಪ ಮಾಡುವುದಿಲ್ಲ. ಬಿಜೆಪಿ ತೆಲಂಗಾಣ ಅಭಿವೃದ್ಧಿಗೆ ಕೆಲಸ ಮಾಡಲಿದೆ. ನಮಗೂ ತೆಲಂಗಾಣಕ್ಕೂ ಒಳ್ಳೆಯ ಅನುಬಂಧವಿದೆ ಎಂದು ತೆಲುಗಿನಲ್ಲಿ ಮೋದಿ ಮಾತನಾಡಿ ಗಮನ ಸೆಳೆದಿದ್ದಾರೆ.
ಭಾರತದ ಮತದಾರರು ಪರಿಪಕ್ವರಿದ್ದಾರೆ. ಸ್ಥಿರ ಸರ್ಕಾರಕ್ಕಾಗಿ ಯೋಚಿಸಿ ಬಹುಮತ ನೀಡುತ್ತಿದ್ದಾರೆ. ನಮ್ಮ ನೀತಿ ನಿರ್ಣಗಳಲ್ಲಿ ದೇಶ ಇದೆ. ಭಾರತ ಮಾತಾ ಕಿ ಜೈ ನಮ್ಮ ಮಂತ್ರವಾಗಿದೆ. ಬಿಜೆಪಿ ಬರೀ ನೀತಿ ರೂಪಿಸುವುದಿಲ್ಲ. ಅದರ ಹಕ್ಕುದಾರರಿಗೆ ತಲುಪಿಸುತ್ತದೆ. ಭಾರತ ಮುಂದುವರಿದರೆ ರಾಜ್ಯವೂ ಮುಂದುವರಿಯಲಿದೆ. ಜನರ ಜೀವನ ಮಟ್ಟ ಉತ್ತಮವಾಗಲಿದೆ. ಅದಕ್ಕಾಗಿ ಜನರು ನಿರಂತರವಾಗಿ ಬಿಜೆಪಿಯನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಜನರ ಬೆಂಬಲ ಸಿಗುತ್ತಿದೆ. ಕೆಲವು ಜನರು ಭ್ರಷ್ಟಾಚಾರಿಗಳ ಜೊತೆಗೆ ನಿಂತಿದ್ದಾರೆ. ಅವರಿಗೆ ಜನರು ಉತ್ತರವನ್ನು ಕೊಟ್ಟಿದ್ದಾರೆ. ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ದೇಶ. ಇಂದು ಭಾರತದಲ್ಲಿ ದಾಖಲೆಯ ಜಿಎಸ್ಟಿ ಸಂಗ್ರಹವಾಗುತ್ತಿದೆ. ಕೃಷಿ, ಡಿಜಿಟಲ್ ಹಣ ವರ್ಗಾವಣೆ ಹೆಚ್ಚುತ್ತಿದೆ. ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿವೆ ಎಂದು ಹೇಳಿದ್ದಾರೆ.