ಬೆಂಗಳೂರು: ವಿದ್ಯಾರ್ಥಿಗಳು ತರಗತಿಗಳಲ್ಲಿ ಹಿಜಬ್, ಕೇಸರಿ ಶಾಲು ಧರಿಸದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ.
ನಿನ್ನೆ ವಿಚಾರಣೆ ವೇಳೆ ಹೇಳಲಾಗಿದ್ದ ಮೌಖಿಕ ಆದೇಶ ಇವತ್ತು ಕರ್ನಾಟಕ ಹೈಕೋರ್ಟ್ ವೆಬ್‍ಸೈಟ್‍ನಲ್ಲಿ ಪ್ರಕಟ ಆಗಿದೆ. ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರಿದ್ದ ಪೀಠ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!
Advertisement
Advertisement
ಹೈಕೋರ್ಟ್ ಆದೇಶದಲ್ಲಿ ಏನಿದೆ?: ಮೊದಲಿಗೆ, ವಿಶೇಷವಾಗಿ ಈ ಪ್ರಕರಣ ಈ ಕೋರ್ಟ್‍ನಲ್ಲಿ ವಿಚಾರಣೆಯಲ್ಲಿರುವಾಗ ಮತ್ತು ಸಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳು ಮತ್ತು ವೈಯಕ್ತಿಕ ಕಾನೂನುಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವಾಗ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಿರುವುದು ನಮಗೆ ನೋವು ತಂದಿದೆ.
Advertisement
Advertisement
ನಮ್ಮದು ಬಹು ಸಂಸ್ಕೃತಿ, ಧರ್ಮ, ಭಾಷೆಗಳ ದೇಶ. ಯಾವುದೇ ಒಂದು ಧರ್ಮದೊಂದಿಗೆ ನಮ್ಮ ರಾಷ್ಟ್ರ ಗುರುತಿಸಿಕೊಂಡಿಲ್ಲ. ಜ್ಯಾತ್ಯಾತೀತ ರಾಷ್ಟ್ರವಾಗಿ, ಪ್ರತಿಯೊಬ್ಬರಿಗೂ ಆತನ ಆಯ್ಕೆಯ ನಂಬಿಕೆಯನ್ನು ಆಚರಿಸಲು ಹಕ್ಕಿದೆ ನಿಜ. ಇಂತಹ ಹಕ್ಕುಗಳ ಮೇಲೆ ಭಾರತದ ಸಂವಿಧಾನ ತಾರ್ಕಿಕ ನಿರ್ಬಂಧಗಳನ್ನು ಹೇರಿದೆ. ಸಂವಿಧಾನಿಕವಾಗಿ ತರಗತಿಯೊಳಗೆ ಹಿಜಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗವೇ ಎಂಬ ಬಗ್ಗೆ ಆಳವಾದ ಪರಿಶೀಲನೆ ಆಗಬೇಕಿದೆ. ಅದಕ್ಕಾಗಿ ಸುಪ್ರೀಂಕೋರ್ಟ್‍ನ ಮತ್ತು ಇತರೆ ಹೈಕೋರ್ಟ್‍ಗಳ ಆದೇಶವನ್ನು ಬಳಸಿಕೊಳ್ಳಲಾಗುತ್ತಿದೆ.
ನಮ್ಮದು ನಾಗರಿಕ ಸಮಾಜವಾಗಿ ಯಾವುದೇ ವ್ಯಕ್ತಿ ಧರ್ಮ, ಸಂಸ್ಕøತಿ ಅಥವಾ ಇತರೆ ಹೆಸರಲ್ಲಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಅನುಮತಿ ಇಲ್ಲ. ಮುಗಿಯದ ಪ್ರತಿಭಟನೆಗಳು ಮತ್ತು ಅನಿರ್ದಿಷ್ಟವಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿರುವುದು ಒಳ್ಳೆಯದಲ್ಲ. ತುರ್ತು ಆಧಾರದಲ್ಲಿ ಈ ವಿಷಯಗಳ ವಿಚಾರಣೆ ಮುಂದುವರಿಯಲಿದೆ. ಪ್ರತಿಭಟನೆಗಳ ಮುಂದುವರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದರ ಬದಲು ತರಗತಿಗಳಿಗೆ ಮರುಳುವುದರಿಂದ ವಿದ್ಯಾರ್ಥಿಗಳ ಹಿತಾಸಕ್ತಿಗೆ ಒಳ್ಳೆಯದು. ಶೈಕ್ಷಣಿಕ ವರ್ಷ ಶೀಘ್ರವೇ ಅಂತ್ಯವಾಗಲಿದೆ. ಸಂಬಂಧಪಟ್ಟವರು ಮತ್ತು ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಆಶಿಸುತ್ತೇವೆ ಮತ್ತು ನಂಬುತ್ತೇವೆ. ಇದನ್ನೂ ಓದಿ: ಹಿಜಬ್ ನಿಷೇಧಕ್ಕೆ ತಡೆ ಕೋರಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್
ಮೇಲ್ಕಾಣಿಸಿದ ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ಆದಷ್ಟು ಬೇಗ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತೆಯೂ ಮತ್ತು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಮರಳಲು ಅವಕಾಶ ಮಾಡಿಕೊಡುವಂತೆಯೂ ಕೋರುತ್ತೇವೆ. ಈ ಅರ್ಜಿಗಳ ವಿಚಾರಣೆ ಬಾಕಿ ಇರಿಸಿ, ಎಲ್ಲ ವಿದ್ಯಾರ್ಥಿಗಳು ಅವರವರ ಧರ್ಮ ಅಥವಾ ನಂಬಿಕೆ ಕೇಸರಿ ಶಾಲು, ಹಿಜಬ್, ಧರ್ಮ ಧ್ವಜಗಳು ಅಥವಾ ಇತರೆಗಳನ್ನು ತರಗತಿಯೊಳಗೆ ಮುಂದಿನ ಆದೇಶದವರೆಗೂ ಧರಿಸದಂತೆ ನಿರ್ಬಂಧಿಸುತ್ತಿದ್ದೇವೆ. ಈ ಆದೇಶ ಕಾಲೇಜು ಅಭಿವೃದ್ಧಿ ಸಮಿತಿ ವಿದ್ಯಾರ್ಥಿ ವಸ್ತ್ರ ಸಂಹಿತೆ, ಸಮವಸ್ತ್ರ ನಿಗದಿಪಡಿಸಿರುವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಆಗಲಿದೆ.