Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ

Districts

ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ

Public TV
Last updated: November 3, 2024 7:43 am
Public TV
Share
2 Min Read
Hassan 2
SHARE

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ (Hassan) ಅಧಿದೇವತೆ ಹಾಸನಾಂಬೆಯ ಈ ಬಾರಿಯ ದರ್ಶನೋತ್ಸವ ತೆರೆಗೆ ಕ್ಷಣಗಣನೆ ಆರಂಭವಾಗಿದೆ.

ಭಾನುವಾರ ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಬಾಗಿಲು ಮುಚ್ಚುವ ಮುನ್ನಾ ದಿನವಾದ ಶನಿವಾರ ಗಣ್ಯರು ಹಾಗೂ ಭಕ್ತರು (Devotees) ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಹೀಗಾಗಿ ದೇವಾಲಯದ ಒಳ ಹೊರಗೆ ಭಕ್ತರ ಜಾತ್ರೆಯೇ ನೆರೆದಿತ್ತು. ಈ ಬಾರಿ ಜಾತ್ರಾ ಮಹೋತ್ಸವ ಇತಿಹಾಸ ನಿರ್ಮಿಸಿದ್ದು, ಹಲವು ಹೊಸ ದಾಖಲೆಗಳು ನಿರ್ಮಾಣವಾಗಿದೆ.

Hassan 3

ಹೌದು, ಹಾಸನಾಂಬೆ ದರ್ಶನೋತ್ಸವದ ತೆರೆಗೆ ಕೌಂಟ್‌ಡೌನ್ ಶುರುವಾಗಿದೆ. ನಿನ್ನೆ ವೀಕೆಂಡ್ ಜೊತೆಗೆ ಹಬ್ಬದ ರಜೆಯಿದ್ದಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಅಧಿ ದೇವತೆಯ ದರ್ಶನ ಪಡೆದು ಪುನೀತರಾದ್ರು. ಒಟ್ಟು ದಿನಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಜಟಾಪಟಿ – 1,000, 300 ರೂ. ಪಾಸ್‌ ಮಾರಾಟಕ್ಕೆ ಮರುಚಾಲನೆ

1,000, 300 ರೂ. ವಿಶೇಷ ದರ್ಶನದ ಟಿಕೆಟ್‌ಗಳು, ಲಾಡು ಮಾರಾಟ ಹಾಗೂ ದೇವರ ಸೀರೆ ಮಾರಾಟದಿಂದ 8 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಹಾಸನಾಂಬೆ ಇತಿಹಾಸದಲ್ಲೇ ಈ ಬಾರಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸಂಖ್ಯೆಯ ಭಕ್ತರಿಂದ ದೇವಿ ದರ್ಶನ ಹಾಗೂ ಅತಿ ಹೆಚ್ಚು ಆದಾಯ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಂದ ಲಕ್ಷಾಂತರ ಭಕ್ತರು – ಜನರ ನಿಯಂತ್ರಣಕ್ಕೆ ಪಾಸ್‌ ಮಾರಾಟ ರದ್ದು

Hassan

ನಿನ್ನೆ ರಾತ್ರಿಯೇ ಸಿದ್ಧೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೊಂಡೋತ್ಸವ ಜರುಗಿತು. ಮುಂಜಾನೆವರೆಗೂ ಭಕ್ತರಿಗೆ ದೇವಿ ಹಾಸನಾಂಬೆ ದರ್ಶನ ದೊರಕಿತ್ತು. 6 ಗಂಟೆ ಬಳಿಕ ಸಾರ್ವಜನಿಕ ದರ್ಶನಕ್ಕೆ ತೆರೆ ಎಳೆಯಲಾಯ್ತು. ಮಧ್ಯಾಹ್ನ 12 ಗಂಟೆ ನಂತರ ವಿಶ್ವರೂಪ ದರ್ಶನದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕ ಎಚ್.ಪಿ ಸ್ವರೂಪ್‌ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ, ಆಡಳಿತಾಧಿಕಾರಿ ಮಾರುತಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಿದ್ದು, ಆ ಮೂಲಕ ಈ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.

ಒಟ್ಟಿನಲ್ಲಿ ಅಕ್ಟೋಬರ್ 24 ರಿಂದ ಆರಂಭಗೊಂಡಿದ್ದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅದ್ದೂರಿ ಮತ್ತು ವಿಜೃಂಭಣೆಯಿಂದ ಜರುಗಿದ್ದು, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ. ಇವತ್ತು ಮಧ್ಯಾಹ್ನ 12 ಗಂಟೆ ನಂತರ ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಹಾಸನಾಂಬೆ ದೇವಿ ದರ್ಶನ ಮುಗಿಸಿ ಹಿಂತಿರುಗುವ ವೇಳೆ ಕಾರು ಡಿಕ್ಕಿ- ತಂದೆ, ಮಗಳು ಸಾವು

TAGGED:Hasanamba DarshanaHasanamba DeviHasanamba templehassanಹಾಸನಹಾಸನಾಂಬೆ ದರ್ಶನಹಾಸನಾಂಬೆ ದೇವಸ್ಥಾನಹಾಸನಾಂಬೆ ದೇವಿ
Share This Article
Facebook Whatsapp Whatsapp Telegram

Cinema news

Pushpa Arunkumar
ಸೈಟ್‌ ವಿಚಾರಕ್ಕೆ ಜಟಾಪಟಿ – ಕೆಡವಿದ್ದ ಕಾಂಪೌಂಡ್‌ ಕಟ್ಟಿಸಲು ಮುಂದಾದ ಯಶ್‌ ತಾಯಿ
Cinema Districts Hassan Karnataka Latest Sandalwood States Top Stories
Ram Charan
ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್‌ಚರಣ್ ಪತ್ನಿ ಉಪಾಸನಾ
Bollywood Cinema Latest Top Stories
Jayamala
ಫಿಲ್ಮ್ ಚೇಂಬರ್‌ ಚುನಾವಣೆ – ಅಧ್ಯಕ್ಷೆ ಪಟ್ಟಕ್ಕೇರಿದ ನಟಿ ಜಯಮಾಲಾ
Bengaluru City Cinema Latest Main Post Sandalwood
Aishwarya Rajesh
ತುಂಡು ಬಟ್ಟೆ ಕೊಟ್ಟು ನಿನ್ನ ಬಾಡಿ ನೋಡ್ಬೇಕು ಅಂದ್ರು – ಕಹಿ ಘಟನೆ ಬಿಚ್ಚಿಟ್ಟ ಐಶ್ವರ್ಯ ರಾಜೇಶ್
Cinema Latest South cinema Top Stories

You Might Also Like

Chabahar Port
Latest

Budget 2026 | ಇರಾನ್‌ಗೆ ಇಲ್ಲ, ಬಾಂಗ್ಲಾ ಅನುದಾನ ಅರ್ಧ ಕಡಿತ

Public TV
By Public TV
51 seconds ago
siddaramaiah
Kalaburagi

ಕರ್ನಾಟಕಕ್ಕೆ ಒಂದು ಚೊಂಬು ಕೊಟ್ಟಿದ್ದಾರೆ: ಬಜೆಟ್‌ನಿಂದ ಅನ್ಯಾಯ ಆಗಿದೆ ಎಂದ ಸಿದ್ದರಾಮಯ್ಯ

Public TV
By Public TV
11 minutes ago
Belagavi
Belgaum

400 ಕೋಟಿ ದರೋಡೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್ – ಪೊಲೀಸರಿಗೆ ತಾನೇ ಶರಣಾದ ಪ್ರಮುಖ ಆರೋಪಿ

Public TV
By Public TV
34 minutes ago
Leopard 1
Chamarajanagar

ಚಾಮರಾಜನಗರ| ಚಿರತೆ ದಾಳಿಗೆ ಕರು ಬಲಿ

Public TV
By Public TV
42 minutes ago
S.S. Mallikarjun
Davanagere

ಆಪ್ತನ ಮಗನಿಂದ ಪೊಲೀಸರ ಮೇಲೆ ಹಲ್ಲೆ – ಯಾರೇ ತಪ್ಪು ಮಾಡಿದ್ರೂ ಒದ್ದು ಒಳಗೆ ಹಾಕಿ: ಎಸ್‌.ಎಸ್‌ ಮಲ್ಲಿಕಾರ್ಜುನ್‌

Public TV
By Public TV
48 minutes ago
Budget 2026
Bengaluru City

Union Budget 2026 | ಕರ್ನಾಟಕಕ್ಕೆ ಸಿಕ್ಕಿದ್ದೇನು? – ಈಡೇರದ ನಿರೀಕ್ಷೆಗಳೇನು?

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?