ಹೃದಯಾಘಾತವಲ್ಲ ಟ್ರ್ಯಾಕ್ಟರ್ ಅಪಘಾತದಲ್ಲಿ ಹಾಸನದ ಯೋಧ ಸಾವು

Public TV
1 Min Read
Hassana soldier Lohit dies in tractor accident

ಹಾಸನ: ರಜೆಯ (Holiday) ಮೇಲೆ ಬಂದಿದ್ದ ಯೋಧ ಟ್ರ್ಯಾಕ್ಟರ್ ಅಪಘಾತದಲ್ಲಿ (Tractor Accident) ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಕೆಂಬಾಳು ಗ್ರಾಮದಲ್ಲಿ ನಡೆದಿದೆ.

ಲೋಹಿತ್ ಅಲಿಯಾಸ್ ಪುಚ್ಚಿ (38) ಮೃತಪಟ್ಟ ಸೈನಿಕ. ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಲೋಹಿತ್ ನಿನ್ನೆ ಟ್ರ್ಯಾಕ್ಟರ್‌ನಲ್ಲಿ ಜಮೀನಿನ ಬಳಿಗೆ ತೆರಳುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್ ಮಗುಚಿ ಬಿದ್ದಿತ್ತು. ಇದನ್ನೂ ಓದಿ: ಹಾಸನ| ಇಂದು ಒಂದೇ ದಿನ ಗೃಹಿಣಿ, ಪ್ರೊಫೆಸರ್‌, ಸರ್ಕಾರಿ ನೌಕರ ಹೃದಯಾಘಾತಕ್ಕೆ ಬಲಿ

ಗಂಭೀರವಾಗಿ ಗಾಯಗೊಂಡಿದ್ದ ಲೋಹಿತ್‌ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕಳೆದ 18 ವರ್ಷಗಳಿಂದ ಸೈನಿಕರಾಗಿ ಸಲ್ಲಿಸುತ್ತಿರುವ ಲೋಹಿತ್ ಏಳು ವರ್ಷದ ಹಿಂದೆ ಮದುವೆಯಾಗಿದ್ದು ಮೂರು ವರ್ಷದ ಹೆಣ್ಣು ಮಗುವಿತ್ತು. ಇದನ್ನೂ ಓದಿ: ಹಾಸನ ಯುವಜನತೆಯಲ್ಲಿ ಹೃದಯಾಘಾತ – ತನಿಖೆಗೆ ವಿಶೇಷ ಸಮಿತಿ ರಚಿಸಿದ ಸರ್ಕಾರ

ಜುಲೈ 3 ರಂದು ರಜೆ ಮುಗಿಸಿ ಕರ್ತವ್ಯಕ್ಕೆ ಲೋಹಿತ್ ಮರಳಬೇಕಿತ್ತು. ಆದರೆ ಅಪಘಾತದಲ್ಲಿ ಸಾವನ್ನಪ್ಪಿದ್ದು ಕುಟುಂಬಸ್ಥರಲ್ಲಿ ಆಕ್ರಂದ ಮುಗಿಲು ಮುಟ್ಟುವಂತೆ ಮಾಡಿದೆ. ಇಂದು ಬೆಳಗ್ಗೆ ಲೋಹಿತ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಕುಟುಂಬಸ್ಥರು ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಖಚಿತ ಪಡಿಸಿದ್ದಾರೆ.

Share This Article