ಹಾಸನ: ಹಾಸನ ಕ್ಷೇತ್ರದ ಬಿಜೆಪಿ ಶಾಸಕರಾದ ಪ್ರೀತಂ ಜೆ ಗೌಡ ಅವರು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ ಅಂತ ಯುವಕರ ತಂಡವೊಂದು ಮನವಿ ಮಾಡಿದೆ.
ಆಪರೇಷನ್ ಕಮಲಕ್ಕಾಗಿ ರೆಸಾರ್ಟ್ ರಾಜಕೀಯ ಮಾಡಿಕೊಂಡು ಶಾಸಕರು ಕಾಣ್ಮರೆಯಾಗಿದ್ದಾರೆ. ಗುರುಗ್ರಾಮದಲ್ಲಿ ಬಿಜೆಪಿ ಶಾಸಕರನ್ನು ಪಕ್ಷದ ಮುಖಂಡರು ರೆಸಾರ್ಟ್‍ನಲ್ಲಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ನಮಗೆ ಸ್ಪಂದಿಸಬೇಕಾದ ಶಾಸಕರು ಕಾಣೆಯಾದರೆ ನಾವೇನು ಮಾಡಬೇಕು ಅಂತ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿ, ಜನರಿಗಾಗಿ ಕೆಲಸ ಮಾಡಲಿ ಅಂತ ಶಾಸಕರನ್ನು ಆರಿಸಿದ್ದೇವೆ. ಆದ್ರೆ ನಮ್ಮ ಕುಂದು ಕೊರತೆ ಹೇಳಿಕೊಳ್ಳಲು ಶಾಸಕರು ಸಿಗುತ್ತಿಲ್ಲ. ಹತ್ತು ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಕಾಣೆಯಾಗಿದ್ದಾರೆ. ಅವರು ದೂರದ ಊರಲ್ಲಿ ರೆಸಾರ್ಟಿನಲ್ಲಿ ಕುಳಿತುಕೊಂಡರೆ ಜನರಿಗಾಗಿ ಕೆಲಸ ಮಾಡುವವರು ಯಾರು? ಹೀಗಾಗಿ ಅವರನ್ನು ಹುಡುಕಿಕೊಡಿ ಅಂತ ದೂರು ನೀಡಲು ಈಗ ಎಸ್ ಪಿ ಕಚೇರಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv