ಹಾಸನ: ನ್ಯೂ ಇಯರ್ ಪಾರ್ಟಿಗೆ (New year 2026) ಗೋವಾಕ್ಕೆ (Goa) ಹೋಗಿದ್ದ ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾನೆ.
ಮೃತನನ್ನು ರಕ್ಷಿತ್ (26) ಎಂದು ಗುರುತಿಸಲಾಗಿದೆ. ಸಂಬಂಧಿಕರು ಹಾಗೂ ಸಹೋದರರಾದ ಚಿದಂಬರಂ, ಪ್ರವೀಣ್ ಜೊತೆ ಡಿ.31 ರಂದು ರಕ್ಷಿತ್ ಗೋವಾಗೆ ತೆರಳಿದ್ದರು. ಡಿ.31 ರಂದು ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಿದ್ದರು. ಜ.1 ರಂದು ತಿಂಡಿ ಮುಗಿಸಿದ ರಕ್ಷಿತ್, ಚಿದಂಬರಂ ಹಾಗೂ ಪ್ರವೀಣ್ ಗೋವಾದಲ್ಲಿ ತಿರುಗಾಡುತ್ತಿದ್ದರು. ಈ ವೇಳೆ ರಕ್ಷಿತ್‌ಗೆ ದಿಢೀರ್ ಹೃದಯಾಘಾತವಾಗಿದೆ. ಇದನ್ನೂ ಓದಿ: ಮಕ್ಕಳಿಗೆ ಮನೆ ಬಿಟ್ಟು ಹೋಗಿ ಎಂದ ಮಾಜಿ ವಾಯುಪಡೆ ಅಧಿಕಾರಿಗೆ ಗುಂಡಿಕ್ಕಿ ಹತ್ಯೆ
ಕೂಡಲೇ ಸ್ಥಳೀಯ ಆಸ್ಪತ್ರೆಗೆ ಜೊತೆಯಲ್ಲಿದ್ದವರು ಕರೆದೊಯ್ದಿದ್ದರು. ಅಷ್ಟರಲ್ಲಿ ರಕ್ಷಿತ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗೋವಾದಿಂದ ಸ್ವಗ್ರಾಮಕ್ಕೆ ಮೃತದೇಹ ತಂದಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ಮದುವೆ ಆಗ್ತೀನಿ ಅಂತ ನಂಬಿಸಿ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಸರ್ಕಾರಿ ವೈದ್ಯನಿಂದ ಅತ್ಯಾಚಾರ

