ಹಾಸನ/ಬೆಂಗಳೂರು: ನಟಿ ಆಶಿಕಾ ರಂಗನಾಥ್ (Ashika Ranganath) ಸಂಬಂಧಿ ಅಚಲ ಸೂಸೈಡ್ ಪ್ರಕರಣದ ತನಿಖೆ ಪುಟ್ಟೇನಹಳ್ಳಿ ಪೊಲೀಸರು ಚುರುಕುಗೊಳಿಸಿದ್ದಾರೆ.
ನವೆಂಬರ್ 21ರಂದು ಅಚಲ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಬಳಿಕ ಅಚಲ ಅವರ ತಂದೆ ಹರ್ಷ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ (Puttanahalli Police Station) ದೂರು ನೀಡಿದ್ದರು. ಮಗಳ ಸಾವಿಗೆ ನೇರ ಕಾರಣ ಮಯಾಂಕ್ ಗೌಡ. ಅಚಲಾಳನ್ನ ಪ್ರೀತಿಸುವುದಾಗಿ ನಂಬಿಸಿ ಸುತ್ತಾಡಿದ್ದ. ಆರೋಪಿ ಮಯಾಂಕ್ ಗೌಡ ಸುತ್ತಾಡಿದಷ್ಟೇ ಅಲ್ಲದೆ ಲೈಂಗಿಕವಾಗಿ ಸಹಕರಿಸಲು ಒತ್ತಾಯ ಮಾಡುತ್ತಿದ್ದ. ಅದಕ್ಕೆ ಮೃತ ಅಚಲ ಒಪ್ಪಿಕೊಳ್ಳದೇ ಇದ್ದಾಗ ಆಕೆಗೆ ಹಲವು ಬಾರಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ. ನನ್ನ ಮಗಳ ಸಾವಿಗೆ ನೇರ ಕಾರಣವಾಗಿರುವ ಮಯಾಂಕ್ ಗೌಡ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರಗಿಸುವಂತೆ ದೂರು ನೀಡಿದ್ದರು.

ಮೃತ ಅಚಲ ತಂದೆ ಹರ್ಷ ನೀಡಿದ್ದ ದೂರಿನ ಆಧಾರದ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಆರೋಪಿ ಮಯಾಂಕ್ ಗೌಡ ವಿರುದ್ಧ ಬಿಎನ್‌ಎಸ್ 108, 352, ಆತ್ಮಹತ್ಯೆ ಪ್ರಚೋದನೆ, ಲೈಂಗಿಕ ಕಿರುಕುಳ ಆರೋಪದ ಮೇಲೆ ಎಫ್‌ಐಆರ್ ದಾಖಲಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಟಿ ಆಶಿಕಾ ರಂಗನಾಥ್ ಸಂಬಂಧಿಗೆ ಲೈಂಗಿಕ ಕಿರುಕುಳ ಆರೋಪ; ಯುವತಿ ಆತ್ಮಹತ್ಯೆ

ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಡೆತ್ ನೋಟ್ ಆಗಲಿ, ಮೃತ ಅಚಲ ಪೋಷಕರು ಮಾಡಿರುವ ಆರೋಪ ಸಂಬಂಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಮೃತ ಅಚಲ ಮೊಬೈಲ್ ಅನ್ನು ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಮೊಬೈಲ್‌ನಲ್ಲಿ ಆರೋಪಿ ಹಾಗೂ ಅಚಲ ನಡುವೆ ನಡೆದಿರುವ ಚಾಟಿಂಗ್, ಸಿಡಿಆರ್ ವರದಿ ಸಿಕ್ಕಿದ್ರೆ ಆರೋಪಿ ಮಯಾಂಕ್ ಗೌಡ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರಗಿಸಲು ಪುಟ್ಟೇನಹಳ್ಳಿ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಜಾತಿ ಬೇರೆ ಅಂತ ಯುವಕನ ಕೊಲೆ; ಲವ್ವರ್ ಮೃತದೇಹವನ್ನೇ ಮದುವೆಯಾದ ಯುವತಿ

