– ಚಾಲಕನಿಗೆ ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆ
ಹಾಸನ: ಮೊಸಳೆಹೊಸಳ್ಳಿಯಲ್ಲಿ (Mosalehosalli) ನಡೆದ ಭೀಕರ ದುರಂತದಲ್ಲಿ ಹತ್ತು ಜನ ಸಾವನ್ನಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಟ್ರಕ್ ಚಾಲಕ ಭುವನೇಶ್ ಬಗ್ಗೆ ಆತನ ಗ್ರಾಮಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಆತನಿಂದ ಆದ ಈ ದುರಂತಕ್ಕೆ ಕಂಬನಿ ಮಿಡಿದಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಭವನೇಶ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹೊಳೆನರಸೀಪುರದ ಕಟ್ಟೆಬೆಳಗುಲಿ ಗ್ರಾಮದ ಆತ ಒಳ್ಳೆಯ ಹುಡುಗನೇ ಆಗಿದ್ದಾನೆ. ಆದರೆ ಈ ಘಟನೆ ಅವನಿಂದ ಆಗಿದ್ದು ನಮಗೂ ನೊವಿದೆ. ಎರಡು ವರ್ಷಗಳ ಹಿಂದೆ ಆತ ಪತ್ನಿಯನ್ನು ಕಳೆದುಕೊಂಡಿದ್ದ. ಬಳಿಕ ತಾಯಿ ತಂದೆ, ಮಗಳ ಜೊತೆ ಹೊಳೆನರಸೀಪುರದಲ್ಲಿ ವಾಸವಾಗಿದ್ದ ಎಂದಿದ್ದಾರೆ. ಇದನ್ನೂ ಓದಿ: Hassan Tragedy | ಹೆಚ್ಚಿನ ಪರಿಹಾರ ಕೊಡದಿದ್ರೆ ರಾಜೀನಾಮೆ ಕೊಟ್ಟು ಹೋಗಿ – ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ
ಗ್ರಾಮದಲ್ಲಿ ಸ್ವಂತ ಮನೆ ಹಾಗೂ ಸ್ವಲ್ಪ ಜಮೀನು ಹೊಂದಿರುವ ಭುವನೇಶ್ ಕುಟುಂಬ, ಸೆ.12 ರಂದು ಕೆಲಸ ಮುಗಿಸಿ ಹೊಳೆನರಸೀಪುರದ ಮನೆಗೆ ಹೊರಡುವ ವೇಳೆ ಈ ದುರಂತ ಸಂಭವಿಸಿತ್ತು. ದುರಂತದಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದರು. ಅಪಘಾತದಲ್ಲಿ 22 ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ ಓರ್ವನ ಸ್ಥಿತಿ ಗಂಭಿರವಾಗಿದೆ.
ಟ್ರಕ್ ಚಾಲಕ ಭುವನೇಶ್‍ನನ್ನು ಹೃದಯ ತಪಾಸಣೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಂದು (ಸೆ.15) ಬೆಳಿಗ್ಗೆ ಬೆಳ್ಳೂರು ಬಿಜಿಎಸ್ ಆಸ್ಪತ್ರೆಯಿಂದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ಹಾಸನ ದುರಂತ – ಮೃತ ಎಂಜಿನಿಯರಿಂಗ್ ವಿದ್ಯಾರ್ಥಿ ಕುಟುಂಬಕ್ಕೆ ನೆರವಾದ ಹೆಚ್‌ಡಿಡಿ