ಹಾಸನ: ಕೋರ್ಟ್ ಹಿಜಬ್‍ಗೆ ಅವಕಾಶ ಕೊಡದಿದ್ರೆ, ನಾವು ಶಾಲೆಗೇ ಬರಲ್ಲ ಎಂದು ಹಾಸನದ ಬೇಲೂರಿನಲ್ಲಿ ವಿದ್ಯಾರ್ಥಿನಿಯರು ತಮ್ಮ ನಿರ್ಧಾರವನ್ನು ಖಡಕ್ಕಾಗಿ ಶಿಕ್ಷಕರಿಗೆ ತಿಳಿಸಿದ್ದಾರೆ.
ಇಂದು ಹಿಜಬ್ ಧರಿಸಿ ಶಾಲೆಗೆ ಬಂದ ಬೇಲೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಹಿಜಬ್ ತೆಗೆಯುವಂತೆ ಸೂಚಿಸಿದ್ದಾರೆ. ಆದರೆ ಶಾಲೆಯ ಮೈದಾನದಲ್ಲೇ ಕುಳಿತ ವಿದ್ಯಾರ್ಥಿನಿಯರು ಹಿಜಬ್ ತೆಗೆಯುವುದಿಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ.
Advertisement
Advertisement
ಈ ವೇಳೆ ವಾಗ್ವಾದ ನಡೆಸಿದ ಅವರು, ಹಿಜಬ್ ಹಾಕಲು ಅವಕಾಶ ಇಲ್ಲ ಎಂದು ಕೋರ್ಟ್ ತೀರ್ಪು ಕೊಟ್ಟರೆ ನಾವು ಶಾಲೆಗೇ ಬರಲ್ಲ. ಹಿಂದೂಗಳು ಹಣೆಗೆ ಕುಂಕುಮ ಇಡುತ್ತಾರೆ. ನಾವು ಅದನ್ನು ಪ್ರಶ್ನೆ ಮಾಡುತ್ತೇವಾ. ಹಿಜಬ್ ಹಾಕಿಕೊಂಡು ತಾನೇ ಬಂದಿದ್ದೇವೆ. ನಾವು ಅವರ ತಲೆ ಮೇಲೆ ಕುಳಿತಿದ್ದೇವಾ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!
Advertisement
ಮಾತಿನ ವೇಳೆ ಅಲ್ಲಾಹೋ ಅಕ್ಬರ್ ಎಂದು ವಿದ್ಯಾರ್ಥಿನಿಯರು ಘೋಷಣೆ ಕೂಗಿದ್ದು, ವಿದ್ಯಾರ್ಥಿನಿಯರಿಗೆ ಆ ರೀತಿ ಕೂಗದಂತೆ ಶಿಕ್ಷಕರು ಸೂಚನೆ ನೀಡಿದ್ದಾರೆ. ಅಂತಿಮವಾಗಿ ಶಾಲೆಗೆ ಹಾಜರಾಗದೆ ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ.
Advertisement