ಹಾಸನ: ಭಾರೀ ಮಳೆಯಿಂದ ಸಂಚಾರ ಸ್ಥಗಿತವಾಗಿದ್ದ ಶಿರಾಡಿಘಾಟ್‍ನಲ್ಲಿ ಬರೋಬ್ಬರಿ 5 ತಿಂಗಳ ನಂತರ ಮತ್ತೆ ವಾಹನಗಳ ಸಂಚಾರ ಆರಂಭವಾಗಿದೆ. ಆದ್ರೆ ರಸ್ತೆಯ ಎರಡೂ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದ ಕಡೆ ಇನ್ನೂ ದುರಸ್ತಿ ಕಾರ್ಯ ಸಂಪೂರ್ಣ ಮುಗಿದಿಲ್ಲ. ಈಗಲೂ ಒಟ್ಟು 26 ಕಿಮೀ ಉದ್ದದ ಶಿರಾಡಿಘಾಟ್ ನಲ್ಲಿ ಹಲವು ಕಡೆ ಏಕ ಸಂಚಾರಕ್ಕಷ್ಟೇ ಅವಕಾಶವಿದ್ದು, ಕೊಂಚ ಆಯತಪ್ಪಿದ್ರೂ ಅಪಾಯ ಗ್ಯಾರಂಟಿ. ಆಕಸ್ಮಾತ್ ಮತ್ತೆ ಮಳೆ ಶುರುವಾದ್ರೆ ಅನಾಹುತ ಅಕ್ಕಪಕ್ಕದಲ್ಲೇ ಕಾದು ಕುಳಿತಿರುವ ಹಿನ್ನೆಲೆಯಲ್ಲಿ ಶಿರಾಡಿ ಹಾದಿ ಸೇಫ್ ಎನ್ನುವ ಅಭಯ ಇನ್ನೂ ಸಿಕ್ಕಿಲ್ಲ.
Advertisement
ರಾಜಧಾನಿ ಬೆಂಗಳೂರು-ಮಂಗಳೂರು ನಡುವೆ ನೇರ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಶಿರಾಡಿಘಾಟ್. ಭಾರೀ ಮಳೆಯಿಂದಾಗಿ ಸ್ಥಗಿತವಾಗಿದ್ದ ಶಿರಾಡಿ ಮಾರ್ಗದಲ್ಲಿ ಬರೋಬ್ಬರಿ 5 ತಿಂಗಳ ನಂತರ ಭಾರಿ ವಾಹನಗಳ ಸಂಚಾರ ಆರಂಭವಾಗಿದೆ. ಲಘು ವಾಹನ ಸೇರಿದಂತೆ 16 ಚಕ್ರಗಳ ಲಾರಿಗೂ ಅವಕಾಶ ಕೊಟ್ಟಿರೋದು ಕರಾವಳಿ ಭಾಗಕ್ಕೆ ನಾನಾ ರೀತಿಯ ಸರಕು ಸರಂಜಾಮು ಸಾಗಾಟಕ್ಕೆ ಅನುಕೂಲವಾಗಿದೆ.
Advertisement
Advertisement
ಆದ್ರೆ ಶಿರಾಡಿ ಘಾಟ್ ಇನ್ನೂ ಸೇಫ್ ಆಗಿಲ್ಲ. ಯಾಕಂದ್ರೆ ರಸ್ತೆಯ ಎರಡೂ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಇನ್ನೂ ದುರಸ್ತಿ ಕಾರ್ಯ ಮುಗಿದಿಲ್ಲ. ಹಲವೆಡೆ ತಾತ್ಕಾಲಿಕವಾಗಿ ತಡೆಗೋಡೆ ಇಲ್ಲವೇ ಮರಳು ಚೀಲ ಜೋಡಿಸಿ ತೇಪೆ ಹಾಕುವ ಕೆಲಸ ಮಾಡಲಾಗಿದೆ. ಈಗಲೂ ಒಟ್ಟು 26 ಕಿಮೀ ಉದ್ದದ ಶಿರಾಡಿಘಾಟ್‍ನಲ್ಲಿ ಹಲವು ಕಡೆ ಏಕ ಸಂಚಾರಕ್ಕಷ್ಟೇ ಅವಕಾಶವಿದ್ದು, ಕೊಂಚ ಆಯತಪ್ಪಿದ್ರೂ ಅಪಾಯ ಗ್ಯಾರಂಟಿ. ಅಕಸ್ಮಾತ್ ಮತ್ತೆ ಹುಚ್ಚು ಮಳೆ ಶುರುವಾದ್ರೆ ಅನಾಹುತ ಅಕ್ಕಪಕ್ಕದಲ್ಲೇ ಕಾದು ಕುಳಿತಿರುತ್ತದೆ ಅಂತ ವಾಹನ ಚಾಲಕರು ಹೇಳುತ್ತಾರೆ.
Advertisement
ಶಿರಾಡಿ ಸಂಚಾರ ಪುನಃ ಆರಂಭವಾಗಿರೋದು ಖುಷಿಯ ವಿಚಾರವೇ. ಆದ್ರೆ ದುರಸ್ತಿಕಾರ್ಯ ಸರಿಯಾಗಿ ಮುಗಿಯದ ಕಾರಣ ಭಾರಿ ಗಾತ್ರದ ವಾಹನ ಸವಾರರಿಗೆ ಅಪಾಯ ಎದುರು ನೋಡ್ತಿದೆ. ಹೀಗಾಗಿ ನೀವೇನಾದ್ರೂ ಈ ಮಾರ್ಗದಲ್ಲಿ ಹೋದ್ರೆ ಸ್ವಲ್ಪ ಹುಷಾರಾಗಿ ವಾಹನ ಚಲಾಯಿಸಬೇಕಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews