ಹಾಸನ: ಶಾಲೆಯ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನಲ್ಲಿ ನಗರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬೀಗ ಒಡೆದು ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ಶಾಲೆಯ ಆವರಣದಲ್ಲಿಯೇ ಕುಡಿದಿರುವ ಕಿಡಿಗೇಡಿಗಳು, ಬಾಟಲಿ ಒಡೆದು ಹಾಕಿದ್ದಾರೆ. ನಂತರ ಶಾಲೆಯ ಕೊಠಡಿಯ ಬೀಗ ಒಡೆದು ಹಾಕಿ ಕಳ್ಳತನ ಮಾಡಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಶಾಲೆಯ ಬೀಗವನ್ನು ಕಿಡಿಗೇಡಿಗಳು ಎರಡನೇ ಬಾರಿ ಒಡೆದಿದ್ದಾರೆ. ಶಾಲೆಯಿಂದ ನೂರು ಮೀಟರ್ ಒಳಗೆ ಮದ್ಯದ ಅಂಗಡಿ ಇರುವುದೇ ಇದಕ್ಕೆಲ್ಲ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.