ಬೆಂಗಳೂರು: ಹಾಸನದಲ್ಲಿ ನಡಿತಿರೋ ಸಮಾವೇಶ (Hassan samavesha) ಅಹಿಂದ ಸಮಾವೇಶ ಅಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.
ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಹಾಸನ ಸಮಾವೇಶಕ್ಕೆ ಜನ ಕಲ್ಯಾಣ ಸಮಾವೇಶ ಎಂಬ ಹೆಸರಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ಅದು ಅಹಿಂದ ಸಮಾವೇಶ ಅಲ್ಲ. ಅಹಿಂದ ಸಮಾವೇಶ ಎಂದು ನಿಮಗೆ ಹೇಳಿದ್ದು ಯಾರು? ಎಂದು ಪತ್ರಕರ್ತರಿಗೆ ಪ್ರಶ್ನಿಸಿದ್ದಾರೆ.
ಪಕ್ಷದ ಅಡಿಯಲ್ಲಿಯೇ, ಪಕ್ಷದ ನಾಯಕರು, ಮುಖಂಡರ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿದೆ. ನಮ್ಮ ಕಾರ್ಯಕ್ರಮಗಳು ಮತ್ತು ಮತದಾರಿಗೆ ಅಭಿನಂದನೆ ಸಲ್ಲಿಸೋಕೆ ಸಮಾವೇಶ ಮಾಡುತ್ತಿದ್ದೇವೆ. ಹಾಸನ ಮಾತ್ರವಲ್ಲ ಇಡೀ ಕರ್ನಾಟಕದಲ್ಲಿ ಇಂತಹ ಸಮಾವೇಶ ಮಾಡುತ್ತೇವೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಿಂದ (Congress) ಮುಖ್ಯಮಂತ್ರಿ ಆಗಿದ್ದಾರೆ. ಸಂಘಟನೆ, ಪಕ್ಷ, ಸರ್ಕಾರ ಇವನ್ನೆಲ್ಲ ಜೊತೆಯಾಗಿ ಅವರು ಮುನ್ನಡೆಸುತ್ತಾರೆ ಎಂದರು.
ಪವರ್ ಶೇರಿಂಗ್ ಬಗ್ಗೆ ಗೊತ್ತಿಲ್ಲ
ಪವರ್ ಶೇರಿಂಗ್ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸುಳಿವು ನೀಡಿದ್ದಾರೆ ಎಂಬ ವಿಚಾರಕ್ಕೆ, ಇದರ ಬಗ್ಗೆ ನನಗೇನು ಗೊತ್ತಿಲ್ಲ. ಈ ಪ್ರಶ್ನೆಯನ್ನು ಅವರ ಬಳಿಯೇ ಕೇಳಿ. ನಮಗೆ ಹೈಕಮಾಂಡ್ ನಿರ್ಣಯವೇ ಅಂತಿಮ. ಇದಕ್ಕಿಂತ ಜಾಸ್ತಿ ನಾನೇನು ಹೇಳೋದಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪವರ್ ಶೇರಿಂಗ್ ಬಗ್ಗೆ ಸಚಿವರ ಗಮನಕ್ಕೆ ಬಂದಿಲ್ಲ. ಇದು ಸಂಪೂರ್ಣವಾಗಿ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯವೂ ಗೊತ್ತಿಲ್ಲ ಎಂದಿದ್ದಾರೆ.