ಹಾಸನ: ಜಿಲ್ಲೆಯೊಳಗೆ ಮಾತ್ರ ಬಸ್ ಸಂಚಾರಕ್ಕೆ ಹಾಸನದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಇದರ ಅರಿವಿಲ್ಲದೆ ರಾಯಚೂರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ ಕೂಲಿ ಕಾರ್ಮಿಕರು ಅಸಹಾಯಕತೆ ಹೊರಹಾಕಿದ್ದಾರೆ.
ನಾವು ಹೆಚ್ಚಿಗೆ ಓದಿಲ್ಲ. ರಾಯಚೂರಿನಿಂದ ಹಾಸನಕ್ಕೆ ಕೆಲಸಕ್ಕೆಂದು ನಾವು ಸುಮಾರು 23 ಜನ ಬಂದಿದ್ದೇವೆ. ಲಾಕ್‍ಡೌನ್ ಪರಿಣಾಮ ಇಷ್ಟು ದಿನ ದಾನಿಗಳು ನೀಡಿದ ಆಹಾರ ಧಾನ್ಯ ಸೇವಿಸಿ ಜೀವನ ನಡೆಸಿದ್ದೇವೆ. ಇಂದು ಬಸ್ ಬಿಟ್ಟಿದ್ದಾರೆ ಅಂದರು. ಅದಕ್ಕೆ ನಮ್ಮ ಊರಿಗೆ ಹೋಗೋಣ ಎಂದು ಬಸ್ ನಿಲ್ದಾಣಕ್ಕೆ ಬಂದರೆ ರಾಯಚೂರಿಗೆ ಬಸ್ ಇಲ್ಲ ಅಂತಿದ್ದಾರೆ. ಹೇಗಾದರೂ ನಮ್ಮನ್ನು ನಮ್ಮ ಊರಿಗೆ ಕಳುಹಿಸಿಕೊಡಿ ಎಂದು ಕಾರ್ಮಿಕರು ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ಕೆಲಸವಿಲ್ಲದೆ ಎಷ್ಟು ದಿನ ಎಂದು ಇಲ್ಲಿ ಇರೋದು. ತುತ್ತು ಅನ್ನಕ್ಕೂ ಪರಡಾಡುವ ಸ್ಥತಿ ಬಂದಿದೆ ಎಂದು ತಮ್ಮ ಲಗೇಜನ್ನು ತಲೆ ಮೇಲೆ ಹೊತ್ತು, ಬಿಸಿಲಲ್ಲಿ ಬಂದ ಕಾರ್ಮಿಕರು ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ.