– ಮಗನ ಕೆಲಸಕ್ಕೆ ತಾಯಿ ಭವಾನಿ ರೇವಣ್ಣ ಸಾಥ್
ಹಾಸನ: ಕೊರೊನಾ ಲಾಕ್‍ಡೌನ್‍ನಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ನೇತೃತ್ವದಲ್ಲಿ ಸುಮಾರು 25 ಸಾವಿರ ದವಸ, ಧಾನ್ಯದ ಬ್ಯಾಗ್ ರೆಡಿ ಮಾಡಲಾಗುತ್ತಿದೆ.
ಪ್ರತಿ ಬ್ಯಾಗ್‍ನಲ್ಲಿ ಅಕ್ಕಿ, ಸಕ್ಕರೆ, ಎಣ್ಣೆ ಸೇರಿದಂತೆ ಸುಮಾರು 10 ದಿನಸಿ ಪದಾರ್ಥಗಳು ಇರಲಿವೆ. ಸೋಮವಾರದಿಂದ 25 ಸಾವಿರ ಆಹಾರ ಧಾನ್ಯದ ಬ್ಯಾಗ್‍ಗಳನ್ನು ಜಿಲ್ಲೆಯಾದ್ಯಂತ ಹಂಚಲು ತೀರ್ಮಾನಿಸಲಾಗಿದೆ. ಒಂದೊಂದು ಬ್ಯಾಗ್‍ನಲ್ಲೂ ಸುಮಾರು ನಾಲ್ಕು ಜನರಿಗೆ ಹತ್ತು ದಿನಕ್ಕೆ ಆಗುವಷ್ಟು ದವಸ ಧಾನ್ಯ ಇರಲಿದ್ದು ಸುಮಾರು ಒಂದು ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ.
Advertisement
Advertisement
ಒಂದು ವೇಳೆ ಕೊರೊನಾ ಲಾಕ್‍ಡೌನ್ ಏಪ್ರಿಲ್ 14ರ ನಂತರ ಮುಂದುವರಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದವಸ ಧಾನ್ಯ ಒದಗಿಸಲು ವ್ಯವಸ್ಥೆ ಮಾಡುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಹೀಗಾಗಲೇ ಲಾಕ್‍ಡೌನ್ ವಿಸ್ತರಣೆ ಮಾಡಿದ್ದಾರೆ. ಧವಸ ಧಾನ್ಯ ತುಂಬಿದ 25 ಸಾವಿರ ಚೀಲಗಳನ್ನು ಪ್ಯಾಕ್ ಮಾಡಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.