DistrictsHassanKarnatakaLatestMain Post

ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ – ಎ.ಮಂಜು ವಿರುದ್ಧ ಪ್ರೀತಂಗೌಡ ಕಿಡಿ

Advertisements

ಹಾಸನ : ನನ್ನನ್ನು ಜನ ಹತ್ತು ವರ್ಷದಿಂದ ನೋಡುತ್ತಿದ್ದಾರೆ, ಅವರನ್ನು ಮೂವತ್ತು ವರ್ಷದಿಂದ ನೋಡುತ್ತಿದ್ದಾರೆ. ಯಾರು ಮಾತಿಗೆ ಬದ್ದವಾಗಿರುತ್ತಾರೆ ಎಂದು ಗೊತ್ತಿದೆ. ನಾನು ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.

ಪ್ರೀತಂಗೌಡ ನಡೆಯಿಂದ ನನ್ನ ಫ್ಯಾಮಿಲಿ ಡಿಸ್ಟರ್ಬ್ ಆಗಿದ್ದರು. ಐದು ಕೋಟಿ ಕೊಡುತ್ತೇನೆ ನಿಮ್ಮ ಮಗನನ್ನು ಹಾಸನದಿಂದ ಎಂಎಲ್‍ಸಿ ಚುನಾವಣೆಗೆ ನಿಲ್ಲಿಸಿ ಎಂದು ಹೇಳಿ ಆನಂತರ ಉಲ್ಟಾ ಹೊಡೆದಿದ್ದರು ಎಂದು ಮಾಜಿ ಸಚಿವ ಎ.ಮಂಜು ಆರೋಪ ಮಾಡಿದ್ದರು.  ಇದನ್ನೂ ಓದಿ:  ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

ಈ ಕುರಿತಂತೆ ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೀತಂಗೌಡ ಅವರು, ನನ್ನನ್ನ ಜನ ಹತ್ತು ವರ್ಷದಿಂದ ನೋಡುತ್ತಿದ್ದಾರೆ, ಅವರನ್ನು ಮೂವತ್ತು ವರ್ಷದಿಂದ ನೋಡುತ್ತಿದ್ದಾರೆ. ಯಾರು ಮಾತಿಗೆ ಬದ್ದವಾಗಿರುತ್ತಾರೆ. ಯಾರೂ ಯಾವ್ಯಾವ ಪಾರ್ಟಿಗೆ ಯಾವ್ಯಾವ ಟೈಪಲಿ ಲಾಂಗ್ ಜಂಪ್ ಮಾಡುತ್ತಾರೆ ಎನ್ನುವುದು ಗೊತ್ತಿದೆ. ನಾನು ಬದುಕಿರುವವರೆಗೂ ಬಿಜೆಪಿ, ಸಾಯೋವರೆಗೂ ಬಿಜೆಪಿ. ಯಾರೂ ಮಾತನಾಡುತ್ತಿಸದಸ ಅವರ ಬಾಯಲ್ಲಿ ಇವತ್ತು ಯಾವ ಪಕ್ಷ, ನಾಳೆ ಯಾವ ಪಕ್ಷ ಅಂದರೆ ಬಾಯಿ ಹೊರಳಲ್ಲ ಅಂಥವರು ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

 

ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ, ಅವರ ಮನಸ್ಥಿತಿ ಅಷ್ಟು ವೀಕಿದೆ, ನಾನು ಅಷ್ಟೊಂದು ಸ್ಟ್ರಾಂಗ್ ಅಂಥ ಈಗ ಗೊತ್ತಾಗುತ್ತಿದೆ. ನಮ್ಮ ಹತ್ತಿರ ಬಿಜೆಪಿ ಅಭ್ಯರ್ಥಿ ಆಗುತ್ತೀನಿ ಅಂತ ಚರ್ಚೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಆಗಲು ಯಾವಾಗ ಡಿಡಿ ಕೊಟ್ಟಿದ್ದಾರೆ ಎನ್ನುವುದನ್ನು ಕೆಪಿಸಿಸಿ ಕಚೇರಿಯಲ್ಲಿ ಚೆಕ್ ಮಾಡಲಿ. ಇವರು ಓದಿರುವ ಸ್ಕೂಲ್‍ನಲ್ಲಿ ಓದಿದರೆ, ಆ ಸ್ಕೂಲಿನಲ್ಲಿ ಟೀಚರ್ ಆಗಿ, ಪ್ರಿನ್ಸಿಪಲ್ ಆಗಿ, ರಿಟೈರ್ಡ್ ಆಗಿ ಮ್ಯಾನೇಜ್ ಮೆಂಟ್ ಕಮಿಟಿ ಅಧ್ಯಕ್ಷನಾದ್ದೀನಿ. ಅವರಿನ್ನೂ ಆ ಸ್ಕೂಲ್‍ನಲ್ಲಿ ಓದುತ್ತಿದ್ದಾರೆ, ಜಗತ್ತಿಗೆ ನಾನೋಬ್ಬನೆ ಬುದ್ದಿವಂತ ಅಂದುಕೊಂಡಿದ್ದಾರೆ. ಆ ಕಾಲ ಮುಗಿದು ಹೋಗಿದೆ. ಅಂತಹವರು ಸುಮಾರು ಜನ ಬಂದಿದ್ದಾರೆ. ಹಾಗಾಗಿ ಹೆಚ್ಚು ಚಾಣಾಕ್ಷತನ ತೋರಿಸೋದು ಬೇಡ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

ನನಗೆ ಬಿಜೆಪಿ ಇಷ್ಟವಿಲ್ಲ, ಚುನಾವಣೆ ಮಾಡದೇ ಗೆಲ್ಲುವುದಕ್ಕೆ ಆಗಲಿಲ್ಲ. ವಾಪಾಸ್ ಹೋಗುತ್ತೇನೆ ಅಂದರೆ ಜಿಲ್ಲೆಯ ಜನ ಒಪ್ಪಿಕೊಳ್ಳುತ್ತಾರೆ. ಯಾರಿಂದನೂ ಬಿಜೆಪಿ ಏನು ವ್ಯಾತ್ಯಾಸ ಆಗಲ್ಲ. ರಾಷ್ಟ್ರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷ. ಹಾಸನ ಜಿಲ್ಲೆಯಲ್ಲೂ ಮುಂದೆ ದೊಡ್ಡ ಪಕ್ಷ ಆಗುತ್ತದೆ. ಎಲ್ಲಾ ರೆಡಿ ಆಗಿರುವ ಮನೆಗೆ ಬಂದು ಗೃಹಪ್ರವೇಶ ಮಾಡುವುದಲ್ಲ. ಹೊಸದಾಗಿ ಸೈಟ್ ಹುಡುಕಿ, ಫೌಂಡೇಶನ್ ತೆಗೆದು, ಕ್ಯೂರಿಂಗ್ ಮಾಡಿ, ಆರ್.ಸಿ.ಸಿ. ಹಾಕಿ ಬಣ್ಣ ಹೊಡೆದು ವಾಸ ಮಾಡಬೇಕೆಂದು ಬಂದಿರುವವನು ನಾನು. ಅವರು ಎಲ್ಲೆಲ್ಲಿ ಮನೆ ಇರುತ್ತೋ ಅಲ್ಲಲ್ಲಿ ಹೋಗಿ ವಾಸ ಮಾಡಿ ಬಾಡಿಗೆ ಮನೆಯಲ್ಲಿ ಹೋಗಿರುತ್ತಾರೆ. ನಾನು ಪರ್ಮನೆಂಟ್ ಗಿರಾಕಿ, ಬಾಡಿಗೆ ಗಿರಾಕಿಗಳ ಬಗ್ಗೆ ಮಾತನಾಡಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published.

Back to top button