ಹಾಸನ: ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವನ ನಡುವಿನ ಸಂಘರ್ಷ ಮುಂದುವರಿದಿದ್ದು, ಕಾಡಾನೆ ದಾಳಿಗೆ (Elephant Attack) ಯುವಕನೋರ್ವ ಬಲಿಯಾದ ಘಟನೆ ಬೇಲೂರಿನ (Beluru) ಬ್ಯಾದನೆ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಅನಿಲ್ (28) ಎಂದು ಗುರುತಿಸಲಾಗಿದೆ. ಗುಜನಹಳ್ಳಿ ಗ್ರಾಮದ ಅನಿಲ್, ಎಸ್ಟೇಟ್‌ಗೆ ಕೆಲಸಕ್ಕೆ ಹೋಗಿದ್ದ. ಸಂಜೆ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಬರುವಾಗ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಸೊಂಡಲಿನಿಂದ ಎತ್ತಿ ಬಿಸಾಡಿ, ಕಾಲಿನಿಂದ ತುಳಿದು ಸಾಯಿಸಿದೆ. ಇದನ್ನೂ ಓದಿ: ಪತ್ನಿ ನೀಡಿದ ಅರ್ಜಿಯಲ್ಲಿ ವೈಟ್ನರ್ ಬಳಕೆ ಮಾಡಿದ್ದು ತಿಳಿದಿಲ್ಲ: ಲೋಕಾ ಪೊಲೀಸರಿಗೆ ಸಿಎಂ ನೀಡಿದ ಉತ್ತರದಲ್ಲಿ ಏನಿದೆ?
Advertisement
Advertisement
ಪುತ್ರನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಅನಿಲ್ ತಾಯಿ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಅಪ್ಪಿ ಕಣ್ಣೀರಿಟ್ಟಿದ್ದಾರೆ. ಸ್ಥಳೀಯರು ಹಾಗೂ ಮೃತನ ಕುಟುಂಬಸ್ಥರು, ಆನೆ ಹಾವಳಿ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Advertisement
Advertisement
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಇಂದಿರಾ ಗಾಂಧಿಗೆ ಸಚಿವನಿಂದ ಅವಮಾನ; ಕಾಂಗ್ರೆಸ್ ಶಾಸಕರ ಅಮಾನತು – ರಾಜಸ್ಥಾನದಲ್ಲಿ ಬೃಹತ್ ಪ್ರತಿಭಟನೆ