ಹಾಸನ: ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಲೇಂದ್ರ (31) ಕೊಲೆಯಾದ ವ್ಯಕ್ತಿ. ಜೆಸಿಬಿ ಆಪರೇಟರ್ ಆಗಿದ್ದ ಜಲೇಂದ್ರ, ನಿನ್ನೆ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದವನು ವಾಪಸ್ ಬಂದಿರಲಿಲ್ಲ. ಇಂದು ಬೆಳಗ್ಗೆ ಜಲೇಂದ್ರ ಸಹೋದರ ಡೈರಿಗೆ ಹಾಲು ಹಾಕಿ ಜಮೀನಿನ ಬಳಿ ಹೋದಾಗ ಹೊಲದ ಬಳಿ ಶವ ಪತ್ತೆಯಾಗಿದೆ.
ಶವದ ಪಕ್ಕದಲ್ಲಿ ಬಿದ್ದಿರುವ ಬಿಯರ್ ಬಾಟಲ್‍ಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ. ಯಾರೋ ಮೊದಲು ಇದೇ ಜಾಗದಲ್ಲಿ ಎಣ್ಣೆ ಪಾರ್ಟಿ ಮಾಡಿರಬಹುದು. ಆ ನಂತರ ಜಲೇಂದ್ರನ ಕೊಲೆ ಮಾಡಿರಬಹುದು ಎಂದು ಅನುಮಾನ ಮೂಡುತ್ತಿದೆ.
ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಕ್ಕಳನ್ನು ಕಾಡುತ್ತಿದೆ ವೈರಲ್ ಫೀವರ್: ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ