ಹಾಸನ: ಕರೆಯಲ್ಲಿ ಎತ್ತಿನ ಗಾಡಿ ಮುಳುಗಿದ ಪರಿಣಾಮ ಜಮೀನಿನ ಕಡೆಗೆ ಹೊರಟಿದ್ದ ರೈತ ದಂಪತಿ ಸೇರಿದಂತೆ ಇಬ್ಬರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಹೊಳೆನರಸೀಪುರದದಲ್ಲಿ ನಡೆದಿದೆ.
ಮೃತ ರೈತ ದಂಪತಿಯನ್ನು ರಾಜೇಗೌಡ (48), ಶಾರದಮ್ಮ (40), ಎಂದು ಗುರುತಿಸಲಾಗಿದೆ. ಬೇಸಿಗೆ ರಜೆ ಎಂದು ಮೈಸೂರಿನಿಂದ ಅಜ್ಜಿ ಮನೆಗೆ ಬಂದಿದ್ದ ದೃತಿ (5) ಮೃತ ಎಂಬ ಬಾಲಕಿರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.
Advertisement
Advertisement
ಬೇಸಿಗೆ ಸಮಯವಾಗಿದ್ದರಿಂದ ಕೆರೆಯ ನೀರಿನ ಪ್ರಮಾಣ ಕಡಿಮೆಯಾಗಿತ್ತು. ನೀರಿಲ್ಲದ ಸಂದರ್ಭದಲ್ಲಿ ಕರೆಯೊಳಗೆ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಮಳೆ ಬಂದ ಕಾರಣ ಕೆರೆಯಲ್ಲಿ ನೀರು ತುಂಬಿತ್ತು. ಇಂದು ಈ ದಡದಿಂದ ಆ ದಡಕ್ಕೆ ಹೋಗಲು ಹತ್ತಿರವಾಗುತ್ತೆ ಎಂಬ ಕಾರಣಕ್ಕೆ ನೀರಿನೊಳಗೆ ಎತ್ತಿನಗಾಡಿಯನ್ನು ಹೊಡೆಯಲಾಗಿದೆ. ಆದರೆ ನೀರಿನ ಮಧ್ಯ ಎತ್ತುಗಳು ಗಾಬರಿಗೊಂಡು ಅಲ್ಲಿ ಮುಂಚೆಯೇ ಇದ್ದ ಗುಂಡಿಯೊಳಗೆ ಗಾಡಿ ಬಿದ್ದಿದೆ. ಈ ಪರಿಣಾಮ ಈಜು ಬಾರದ ಒಂದೇ ಕುಟುಂಬದ ಎಲ್ಲರು ಮೃತ ಪಟ್ಟಿದ್ದಾರೆ.
Advertisement
Advertisement
ಸ್ಥಳಕ್ಕೆ ಭೇಟಿ ನೀಡಿದ ಹಳ್ಳಿ ಮೈಸೂರು ಪೊಲೀಸರು ಶಾರದಮ್ಮ ಮೃತದೇಹ ಮತ್ತು ಎತ್ತಿನ ಗಾಡಿಯನ್ನು ಕೆರೆಯಿಂದ ಹೊರಕ್ಕೆ ತೆಗಿದಿದ್ದಾರೆ. ಇನ್ನುಳಿದ ಮೃತದೇಹಗಳ ಶೋಧಕಾರ್ಯ ಮುಂದುವರೆದಿದೆ. ಎತ್ತುಗಳು ಬಂಡಿಯಿಂದ ಹೊರ ಬಂದು ದಡ ಸೇರಿವೆ. ಈ ಸಂಬಂಧ ಹಳ್ಳಿಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.