ಹಾಸನ: ಕೊರೊನಾ ಸಂಕಷ್ಟದಲ್ಲೂ ಹಾಸನ ಜಿಲ್ಲೆಗೆ ರಾಜ್ಯ ಸರ್ಕಾರಿಂದ ಯಾವುದೇ ಅನುದಾನ ಸಿಗುತ್ತಿಲ್ಲ ಎಂದು ಜೆಡಿಎಸ್ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.
ಇಂದು ಮಾಜಿ ಪ್ರಧಾನಿ ದೇವೇಗೌಡರು ಹಾಸನಕ್ಕೆ ಭೇಟಿ ನೀಡಿ ಜನಸಾಮಾನ್ಯರಿಗೆ ಹಂಚಲು ಆಹಾರ ಧಾನ್ಯಗಳ ಕಿಟ್ ಅನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ಇದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರೊಂದಿಗೆ ಮಾಜಿ ಪ್ರಧಾನಿ ದೇವೇಗೌಡರು ಸಂಸದರ ನಿವಾಸದಲ್ಲಿ ಚರ್ಚೆ ನಡೆಸಿದರು.
Advertisement
Advertisement
ಈ ವೇಳೆ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಜೆಡಿಎಸ್ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದರು. ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ, ಕೊರೊನಾ ಎಂದುಕೊಂಡು ನಮಗೆ ಯಾವ ಅನುದಾನ ಕೊಟ್ಟಿಲ್ಲ ಎಂದರು. ಆಗ ಮಾತನಾಡಿದ ಹೆಚ್‍ಡಿ.ರೇವಣ್ಣ, ಸರ್ಕಾರದಿಂದ ಬಂದ ಹಣ ಯಾವುದಕ್ಕೆ ಖರ್ಚು ಮಾಡಿದ್ದೀರಿ ಅಂದರೆ ಉಸಿರಿಲ್ಲ. ಹೆಚ್ಚಿನ ಬೆಲೆಗೆ ದಿನಸಿ ಮಾರಾಟ ಮಾಡುತ್ತಿದ್ದಾರೆ. ಅವರ ವಿರುದ್ಧವೂ ಕ್ರಮವಿಲ್ಲ, ಜಿಲ್ಲಾಡಳಿತ ಸತ್ತು ಹೋಗಿದೆ ಎಂದು ಆಕ್ರೋಶ ಹೊರಹಾಕಿದರು.
Advertisement
Advertisement
ಇದೇ ವೇಳೆ ಧ್ವನಿಗೂಡಿಸಿದ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ, ಕಾರ್ಡ್ ಇಲ್ಲದವರಿಗೂ ರೇಷನ್ ಕೊಡುತ್ತೇವೆ ಅಂದರು. ಇದುವರೆಗೂ ಯಾರಿಗೆ ಕೊಟ್ಟಿದ್ದಾರೆ. ನಮ್ಮ ನಮ್ಮ ತಾಲೂಕು ಉಳಿಸಿಕೊಳ್ಳೋಣ ನಡೀರಿ ಈ ಕಷ್ಟ ಕಾಲದಲ್ಲಿ ಇದರ ಬಗ್ಗೆ ಮಾತನಾಡುವುದು ಬೇಡ ಎಂದು ಚರ್ಚೆಗೆ ಫುಲ್ ಸ್ಟಾಪ್ ಇಟ್ಟರು.