ಹಾಸನ: ಸರ್ಕಾರಿ ಶಾಲೆಗೆಂದು ಮೀಸಲಿಟ್ಟಿದ್ದ ಜಾಗವನ್ನು ವಕ್ಫ್ ಮಂಡಳಿ (Waqf Board) ಗುಳುಂ ಮಾಡಿದ ಘಟನೆ ಹಾಸನದಲ್ಲಿ (Hassan) ನಡೆದಿದೆ. ರಾಜ್ಯಾದ್ಯಂತ ವಕ್ಫ್ ವಿವಾದ ತೀವ್ರಗೊಂಡ ಬೆನ್ನಲ್ಲೇ ಹಾಸನದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದೆ.
ಬೇಲೂರು (Belur) ತಾಲೂಕಿನ, ಹಳೇಬೀಡು ಹೋಬಳಿ, ಘಟ್ಟದಹಳ್ಳಿ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದ ಸರ್ಕಾರಿ ಶಾಲೆಗೆಂದು ಭೂದಾನ ಮಾಡಿದ್ದ ಜಾಗ ವಕ್ಫ್ ಹೆಸರಿಗೆ ಮಾಡಲಾಗಿದೆ. ಘಟ್ಟದಹಳ್ಳಿ ಗ್ರಾಮದ ಶಾಲೆಗೆ 38 ಗುಂಟೆ ಜಾಗವನ್ನು ಭೂದಾನ ಮಾಡಲಾಗಿತ್ತು. ಸರ್ವೆ ನಂಬರ್ 435ರಲ್ಲಿ 38 ಗುಂಟೆ ಭೂಮಿಯನ್ನು ಸರ್ಕಾರಿ ಶಾಲೆಗೆ ದಾನ ಮಾಡಲಾಗಿತ್ತು. ಪಹಣಿಯಲ್ಲಿ ಭೂದಾನ ಶಾಲೆಗೋಸ್ಕರ ಎಂದು ನಮೂದಾಗಿತ್ತು. ಇದನ್ನೂ ಓದಿ: Raichur | ಎಗ್ಗಿಲ್ಲದೆ ಕಲಬೆರಕೆ ಸೇಂದಿ ಮಾರಾಟ- ಅಧಿಕಾರಿಗಳ ದಾಳಿ ವೇಳೆ 500 ಗ್ರಾಂ ಸಿಎಚ್ ಪೌಡರ್ ಜಪ್ತಿ
ವಕ್ಫ್ ಭೂವಿವಾದದ ನಂತರ ಪಹಣಿ ಪರಿಶೀಲನೆ ನಡೆಸಿದಾಗ ವಕ್ಫ್ ಎಂದು ಹೆಸರು ನಮೂದಾಗಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಗೆ ಭೂದಾನ ಮಾಡಿದ್ದ 38 ಗುಂಟೆ ಜಾಗವನ್ನು ವಕ್ಫ್ ಬೋರ್ಡ್ ನುಂಗಿದೆ. ಶಾಲೆಗೆಂದು ಮೀಸಲಿಟ್ಟಿದ್ದ ಜಾಗವನ್ನು ವಕ್ಫ್ ತನ್ನ ಹೆಸರಿಗೆ ಮಾಡಿಕೊಂಡಿದೆ. ವಕ್ಫ್ ಬೋರ್ಡ್ ವಿರುದ್ಧ ಶಾಸಕ ಹೆಚ್‌ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಬೇಲೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಲಾರಿ, ಕಾರು ನಡುವೆ ಅಪಘಾತ- ದಂಪತಿ ಸ್ಥಳದಲ್ಲೇ ಸಾವು