ಲಾಕ್‍ಡೌನ್ ಬೇಟೆ – 12 ಲಕ್ಷ ಮೌಲ್ಯದ ಅಕ್ರಮ ಮದ್ಯ, ವಾಹನಗಳು ಜಪ್ತಿ

Public TV
1 Min Read
liquor bottle

ಹಾಸನ: ಲಾಕ್‍ಡೌನ್ ನಡುವೆಯೂ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಹಾಸನದಲ್ಲಿ ಇದುವರೆಗೂ 25 ಪ್ರಕರಣ ದಾಖಲಿಸಲಾಗಿದ್ದು, ಒಟ್ಟು 325.710 ಲೀಟರ್ ಅಕ್ರಮ ಮದ್ಯ, 33 ಲೀಟರ್ ಕಳ್ಳಬಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ.

ಹಾಸನ ಜಿಲ್ಲೆಯ ವಿವಿಧೆಡೆ ನಡೆದಿರುವ ದಾಳಿಯಲ್ಲಿ ಸುಮಾರು 22 ಆರೋಪಿಗಳನ್ನು ಬಂಧಿಸಲಾಗಿದ್ದು, ವಶಪಡಿಸಿಕೊಂಡ ವಾಹನಗಳು ಹಾಗೂ ಮದ್ಯದ ಒಟ್ಟು ಅಂದಾಜು ಮೌಲ್ಯ ಸುಮಾರು 12 ಲಕ್ಷ ರೂಪಾಯಿ ಆಗುತ್ತದೆ ಎಂದು ಅಬಕಾರಿ ಉಪ ಆಯುಕ್ತರು ಮಾಹಿತಿ ನೀಡಿದ್ದಾರೆ. ಕೊರೊನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಹಾಸನ ಜಿಲ್ಲೆಯಾದ್ಯಂತ ಮದ್ಯಂದಗಡಿಗಳನ್ನು ಮುಚ್ಚಿಸಲಾಗಿದೆ.

liquor drinking alcohol 837x600 1

ಅಕ್ರಮಗಳನ್ನು ಹತ್ತಿಕ್ಕಿ ಕ್ರಮ ಜರುಗಿಸುವ ಸಲುವಾಗಿ ಹಾಸನ ಜಿಲ್ಲೆಯ 8 ತಾಲೂಕುಗಳಲ್ಲೂ ದಿನದ 24 ಗಂಟೆಯೂ ಕಾರ್ಯಾನಿರ್ವಹಿಸಲು ತಂಡಗಳನ್ನು ರಚಿಸಲಾಗಿದೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮದ್ಯದಗಂಡಿಗಳನ್ನು ಮುಚ್ಚಿಸಿದ ದಿನದಿಂದ ಈವರೆಗೆ ಮದ್ಯದಂಗಡಿಗಳಲ್ಲಿ ಷರತ್ತು ಉಲ್ಲಂಘನೆಗಾಗಿ ಒಟ್ಟು 22 ಬಿಎಲ್‍ಸಿ ಮೊಕದ್ದಮೆಗಳನ್ನು ದಾಖಲಿಸಲಾಗಿದ್ದು, ಅಕ್ರಮ ಮದ್ಯ ಸಾಗಾಣಿಕೆ ಸಂಬಂಧ 6 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *