ಹಾಸನ: ಸಾಮಾನ್ಯವಾಗಿ ಯುವಕರ ದಬ್ಬಾಳಿಕೆ, ಬೆದರಿಕೆಗಳಿಗೆ ಯುವತಿಯರು ಆತಂಕದಿಂದ ದೌರ್ಜನ್ಯ ಸಹಿಸಿಕೊಳ್ಳುವುದೇ ಹೆಚ್ಚು. ಆದರೆ ಹಾಸನ ನಗರದಲ್ಲಿ ಸ್ನೇಹಿತೆಯನ್ನು ಚುಡಾಯಿಸಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಇಬ್ಬರು ಯುವಕರನ್ನು ತಾನೊಬ್ಬಳೇ ಥಳಿಸಿ ಧೈರ್ಯ ಮೆರೆದಿದ್ದಾಳೆ.
ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಆಕ್ರೋಶಗೊಂಡು ಯುವಕರ ಮೇಲೆ ದಬ್ಬಾಳಿಕೆ ಮಾಡಲು ಬಂದಾಗ ಯುವಕನೂ ಸಹ ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಆದರೆ ಕಾಲೇಜು ವಿದ್ಯಾರ್ಥಿನಿ ಬಿಡದೆ ತನ್ನ ಗೆಳತಿಗೆ ಬೆದರಿಕೆಯೊಡ್ಡಿದ ಪುಂಡರಿಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.
Advertisement
Advertisement
ಯುವತಿ ಇಬ್ಬರು ಯುವಕರನ್ನು ಸರಿಯಾಗಿಯೇ ಥಳಿಸಿದ್ದಾಳೆ. ಹೊಡೆಯುವವರೆಗೂ ಯುವಕ ಸುಮ್ಮನಿದ್ದ, ನಂತರ ಯುವಕ ಕೂಡ ಒಮ್ಮೆಲೆ ರೊಚ್ಚಿಗೆದ್ದು ಯುವತಿಯ ಮೇಲೆ ಧಿಡೀರ್ ಹಲ್ಲೆ ಮಾಡಿದ್ದಾನೆ. ಅಷ್ಟರಲ್ಲೇ ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದವರಿಗೆ ಆತಿಥ್ಯ ನೀಡಿ ಬಿಟ್ಟು ಕಳುಹಿಸಿದ್ದಾರೆ.
Advertisement
ಸ್ಥಳದಲ್ಲಿದ್ದ ಇತರೆ ವಿದ್ಯಾರ್ಥಿಗಳು ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಕಾಲೇಜು ಓದಲು ಹಾಸನ ನಗರಕ್ಕೆ ಬರುತ್ತಾರೆ. ಆದರೆ ಇಂದು ನಗರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಎಲ್ಲೆ ಮೀರಿ ವರ್ತಿಸಿದ್ದಾರೆ.