ಹಾಸನ: ಇತ್ತೀಚಿಗೆ ಆನ್‍ಲೈನ್ ದೋಖಾಗಳು ಪದೆ ಪದೇ ನಡೆಯುತ್ತಲೇ ಇದ್ದರೂ ಕೂಡ ಕೆಲವು ಮುಗ್ಧರು ಬಲಿಯಾಗುತ್ತಲೆ ಇದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಜಿಲ್ಲೆಯ ದಂಪತಿ ಕ್ರೈಸ್ತ ಧರ್ಮ ಮತ್ತು ಯೇಸುವಿನ ಹೆಸರಿನಲ್ಲಿ ಮೋಸಹೋಗಿದ್ದಾರೆ.
ಫೇಸ್ ಬುಕ್‍ನಲ್ಲಿ ಪರಿಚಯದ ವ್ಯಕ್ತಿ ಗಿಫ್ಟ್ ಕಳುಹಿಸುತ್ತೇನೆ ಎಂದು ಒಂದು ಲಕ್ಷದ ಎಪ್ಪತ್ತು ಸಾವಿರ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಹೊಳೇನರಸೀಪುರದಲ್ಲಿ ವಾಸವಾಗಿರುವ ಕುಸುಮ ಮತ್ತು ಸ್ಯಾಮುವೆಲ್ ದಂಪತಿ ಮೋಸಹೋಗಿದ್ದಾರೆ.
Advertisement
Advertisement
ಪತಿ ಸ್ಯಾಮುವೆಲ್ ಚರ್ಚ್‍ನಲ್ಲಿ ಫಾದರ್ ಆಗಿದ್ರೆ ಪತ್ನಿ ಕುಸುಮ ಕೂಡ ಸಮಾಜ ಸೇವೆ ಮಾಡಿಕೊಂಡು ಚರ್ಚ್ ಕೆಲಸ ಮಾಡಿಕೊಂಡಿದ್ದಾರೆ. ಕ್ರೈಸ್ತ ಧರ್ಮದ ಪ್ರಚಾರ ಜೊತೆಗೆ ಕೆಲವು ನೊಂದವರನ್ನು ಮನೆಯಲ್ಲಿ ಸೇರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಫೇಸ್ ಬುಕ್‍ನಲ್ಲಿ ವಿಲಿಯಂ ಫ್ರಾಂಕ್ ಎಂಬಾತ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಸ್ಯಾಮುವೆಲ್ ಮತ್ತು ಅವರ ಕುಟುಂಬದ ಬಗ್ಗೆ ಸಾಂತ್ವನ ವ್ಯಕ್ತಪಡಿಸಿದ ಅನಾಮಿಕ ವಿದೇಶದಿಂದ ಲಕ್ಷಾಂತರ ರೂಪಾಯಿ ಹಣ ಕಳುಹಿಸುತ್ತೇನೆ ಎಂದು ಹೇಳಿದ್ದಾನೆ.
Advertisement
Advertisement
ನಿಮ್ಮ ಊರಿನಲ್ಲಿ ಹೊಸದಾಗಿ ಚರ್ಚ್ ನಿರ್ಮಾಣ ಮಾಡಿ. ನಿಮಗೆಲ್ಲ ಏನಾದರು ಸಹಾಯ ಮಾಡಬೇಕೆಂದು ಅನಿಸುತ್ತಿದೆ. ಆ ದೇವರೇ ನಿಮಗೆ ಸಹಾಯ ಮಾಡುತ್ತಿದ್ದಾನೆ ಎಂದೆಲ್ಲ ನಂಬಿಸಿದ್ದಾನೆ. ಮೋಸದ ಮಾತುಗಳನ್ನು ನಂಬಿದ ಇವರು ಒಮ್ಮೆ 28,600 ಇನ್ನೊಂದು ಬಾರಿ 89,000 ಆಮೇಲೆ 49,500 ಹೀಗೆ ಒಟ್ಟು 1,67,100 ರೂಪಾಯಿ ಬ್ಯಾಂಕ್ ಮೂಲಕವೇ ಪಾವತಿ ಮಾಡಿದ್ದಾರೆ. ಆದರೆ ಹಣ ಹಾಕಿದ ನಂತರ ಆ ಗಿಫ್ಟ್ ಬರಲೇ ಇಲ್ಲ. ಹಣ ಕಳೆದುಕೊಂಡವರು ಈಗ ಏನೂ ಮಾಡಲು ತೋಚದೆ ಯಾರೂ ಕೂಡ ಈ ರೀತಿ ಮೋಸ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.