ಹಾಸನ: ಮಾಜಿ ಸಚಿವ ಎ.ಮಂಜು ಕಾಂಗ್ರೆಸ್‍ಗೆ ಹಳಸಿದ ಅನ್ನದ ರೀತಿಯಲ್ಲಿದ್ದಾರೆ. ಎ ಮಂಜು ಎಂಬ ಹಳಸಿದ ಅನ್ನವನ್ನು ಯಾರೂ ತಿನ್ನುವುದಿಲ್ಲ ಎಂದು ಹೇಳುವ ಮೂಲಕ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್ ಅವರು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ ಮಂಜು ಸೇರ್ಪಡೆ ಬಗ್ಗೆ ವರಿಷ್ಠರು ಚರ್ಚಿಸಿದ್ದಲ್ಲಿ ನಾವು ಇದೇ ವಿಚಾರವನ್ನೇ ಹೇಳ್ತೇವೆ. ದೇವೇಗೌಡರು ಸ್ಪರ್ಧಿಸಿದ್ರೆ ನನ್ನ ಬೆಂಬಲ ಇದೆ ಎಂದವರನ್ನು ನಂಬೋದು ಹೇಗೆ? ಅವರು ಪಕ್ಷದ ಸೇರ್ಪಡೆ ಊಹಾಪೂಹದ ವಿಚಾರವಾಗಿದೆ. ರಾಜ್ಯ ನಾಯಕರು ನಮ್ಮನ್ನು ಈ ಕುರಿತು ಅಭಿಪ್ರಾಯ ಕೇಳಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ದೇವೇಗೌಡರು ಅಭ್ಯರ್ಥಿಯಾದರೆ ನಾನು ಬೆಂಬಲಿಸುತ್ತೇನೆ ಎಂದು ಎ.ಮಂಜು ಹೇಳಿದ್ದಾರೆ. ಹಾಗಿದ್ದಾಗ ನಾವು ಈ ಕುರಿತು ಮಾತನಾಡುವುದಕ್ಕೆ ಸಾಧ್ಯವಿಲ್ಲ. ಈ ಕುರಿತು ಪಕ್ಷದ ನಾಯಕರು ಜಿಲ್ಲಾ ಕಾರ್ಯಕರ್ತರಲ್ಲಿ ಚರ್ಚಿಸಿಲ್ಲ. ಬಿಜೆಪಿಗೆ ಗೆಲುವು ಕೊಡಿಸುವ ಯಾವುದೇ ಅಭ್ಯರ್ಥಿಯನ್ನು ವರಿಷ್ಠರು ಸೂಚಿಸಿದರೆ ಸ್ವಾಗತಿಸುತ್ತೇನೆ ಎಂದು ಹೇಳಿದ್ರು.
Advertisement
ಹಾಸನ ಜಿಲ್ಲೆಯಲ್ಲಿ ಇಂದಿನ ಕಾಂಗ್ರೆಸ್ ಪರಿಸ್ಥಿತಿಗೆ ಎ.ಮಂಜು ಕಾರಣವಾಗಿದ್ದಾರೆ. ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಯಾಕೆ ಸೋತರು ಎಂದು ಪ್ರಶ್ನಿಸಿ ಎ.ಮಂಜು ಪಕ್ಷ ಸೇರ್ಪಡೆಗೆ ಪರೋಕ್ಷವಾಗಿ ಜಿಲ್ಲಾ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
Advertisement
ನಮ್ಮ ಪಕ್ಷ ಜಿಲ್ಲೆಯಲ್ಲಿ ಹಿಂದೆಂದಿಗಿಂತಲೂ ಉತ್ತಮ ಸ್ಥಿತಿಯಲ್ಲಿ ಇದೆ. ಇಡೀ ಭಾರತಾದ್ಯಂತ ಮೋದಿಯವರ ಕಾರ್ಯಕ್ರಮಗಳು ಮತ್ತು ಅವರ ನಾಯಕತ್ವ ನಮ್ಮ ಪಕ್ಷದ ಗೆಲುವಿಗೆ ಪೂರಕವಾಗಿದೆ. ಹಿಂದೆ ಅಧಿಕಾರದಲ್ಲಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಜನ ತಿರಸ್ಕರಿಸಿದರು. ಅಪವಿತ್ರ ಮೈತ್ರಿಯ ಸರ್ಕಾರ ಆಂತರಿಕ ಸಮಸ್ಯೆಗಳಿಂದಾಗಿ ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಿಲ್ಲ. ರಾಜ್ಯದ ಪ್ರಗತಿ ರಾಜ್ಯದ ಸಮ್ಮಿಶ್ರ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಮರಿಚೀಕೆಯಾಗಿದೆ ಎಂದರು.
ಕೇವಲ ಹೊಳೇನರಸೀಪುರ ಮಾತ್ರ ಅಭಿವೃದ್ಧಿಯಾಗುತ್ತಿದೆ. ರೇವಣ್ಣನವರು ಕುಟುಂಬ ರಾಜಕಾರಣ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಎಲ್ಲ ಯೋಜನೆಗಳ ಫಲಾನುಭವಿಗಳಾಗಿ ಅವರ ಕುಟುಂಬಸ್ಥರು ಅನುಭವಿಸುತಿದ್ದಾರೆ. ರೇವಣ್ಣ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲಾಧಿಕಾರಿ ವರ್ಗಾವಣೆಯಾಯಿತು. ಎ.ಮಂಜು ಉಸ್ತುವಾರಿ ಸಚಿವರಾಗಿದ್ದಾಗ ಕೂಡ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು. ಎರಡೂ ಪಕ್ಷಗಳನ್ನು ನೋಡಿದ ಜಿಲ್ಲೆಯ ಮತದಾರರು ಈ ಬಾರಿ ಬಿಜೆಪಿಗೆ ಒಲವು ತೋರುತ್ತಾರೆ. ನರೇಂದ್ರ ಮೋದಿಯವರು ಸ್ವಾತಂತ್ರ್ಯದ ಇತಿಹಾಸದಲ್ಲಿ ಯಾರೂ ಮಾಡದಷ್ಟು ಕೆಲಸಗಳನ್ನು ಮಾಡಿದ್ದಾರೆ. ವಿದೇಶಿ ಸಂಬಂಧಗಳನ್ನು ಬಲಪಡಿಸಿದ್ದಾರೆ. ಅಂತರಾಷ್ಟ್ರೀಯ ಸಂಬಂಧಗಳನ್ನು ಬೆಸೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಬಲಗೊಂಡಿದ್ದು ಚುನಾವಣೆಗೆ ಸಿದ್ಧಗೊಂಡಿದೆ ಎಂದು ಅವರು ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv