– ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಶಾಸಕ ಶಿವಲಿಂಗೇಗೌಡ
ಹಾಸನ: ಇಡೀ ಪ್ರಪಂಚವೇ ಕೊರೊನ ವಿರುದ್ಧ ಹೋರಾಟಕ್ಕೆ ನಿಂತಿದೆ. ಆದರೆ ಹಾಸನದ ಅರಸೀಕೆರೆ ನಗರಸಭೆಯ ಕೆಲ ಸಿಬ್ಬಂದಿಗಳು ಮಾತ್ರ ಸರ್ಕಾರಿ ಕಚೇರಿಯೊಳಗೆ ಟಿಕ್‍ಟಾಕ್ ಮಾಡಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.
Advertisement
ನಗರಸಭೆಯ ಕೆಲ ಸಿಬ್ಬಂದಿಗಳು ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಮಾಡಬೇಕಾದ ಕಾರ್ಯಗಳನ್ನು ಮರೆತು ಭಿನ್ನ, ವಿಭಿನ್ನವಾಗಿ ಕಚೇರಿಯೊಳಗೆ ಟಿಕಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅರಸೀಕೆರೆ ನಗರಸಭೆಯ ವ್ಯಾಪ್ತಿಯ ಸ್ವಚ್ಛತೆಯ ಬಗ್ಗೆ ನಿಮಗೆ ಅರಿವಿಲ್ಲ. ಕೊರೊನ ವಿರುದ್ಧ ಹೋರಾಡುವ ಕೆಲಸ ಬಿಟ್ಟು ಕಚೇರಿಯೊಳಗೆ ಟಿಕ್‍ಟಾಕ್ ಮಾಡಲು ನಿಮಗೆ ಅನುಮತಿ ಕೊಟ್ಟವರಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ ಸಿಬ್ಬಂದಿಯ ವಿಡಿಯೋಗಳು ವೈರಲ್ ಆಗಿದೆ. ಸಾರ್ವಜನಿಕರ ವಲಯದಿಂದ ಭಾರಿ ಟೀಕೆ ವ್ಯಕ್ತವಾಗಿದೆ. ಇದೇ ವೇಳೆ ಘಟನೆ ಬಗ್ಗೆ ಅಸಮಾಧಾನ ಹೊರಹಾಕಿರುವ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರು, ಟಿಕ್‍ಟಾಕ್ ವಿಡಿಯೋ ಮಾಡಿರುವ ನಗರಸಭೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.