ವಧುವಿನ ಬಾಳಿಗೆ ಗ್ರಹಣವಾದ ಮೇಕಪ್- ಮದುವೆಯೇ ಕ್ಯಾನ್ಸಲ್!

Public TV
1 Min Read
MAKEUP

ಹಾಸನ: ಆಕೆ ಮದುವೆಯಾಗಲು  ತಯಾರಾಗಿ ಹೊಸ ಜೀವನದ ಕನಸು ಕಂಡವಳು. ಹೊಸ ಬಾಳಿನ ಬಾಗಿಲಿಗೆ ಹೊಸ ಕನಸಿನ ಬೆಳಕು ಬರುವ ಮುನ್ನವೇ ಮೇಕಪ್ (Marriage Makeup) ಅವಳ ಮುಖವನ್ನು ಗ್ರಹಣದಂತೆ ಆವರಿಸಿ ಕನಸನ್ನು ಕಸಿದುಕೊಂಡಿದೆ.

HSN MAKEUP 3

ಹೌದು, ಹೊಸ ಮಾದರಿಯ ಮೇಕಪ್‍ಗೆ ವಧುವಿನ (Bride) ಮುಖವೇ ವಿರೂಪಗೊಂಡು ಮದುವೆ ಕ್ಯಾನ್ಸಲ್ ಆದ ಘಟನೆ ಹಾಸನದ (Hassan) ಅರಸೀಕೆರೆಯಲ್ಲಿ (Arsikere) ನಡೆದಿದೆ. ಇದನ್ನೂ ಓದಿ: ನಿತ್ಯಾನಂದನಿಗೆ ಭಾರತದಲ್ಲಿರೋ ಹಿಂದೂ ವಿರೋಧಿಗಳಿಂದ ಕಿರುಕುಳ- ಕ್ರಮಕ್ಕೆ ಶಿಷ್ಯೆ ಒತ್ತಾಯ

ಮದುವೆಗಾಗಿ ನಗರದ ಗಂಗಾಶ್ರೀ ಹರ್ಬಲ್ ಬ್ಯೂಟಿ ಪಾರ್ಲರ್ ಅಂಡ್ ಸ್ಪಾನಲ್ಲಿ ಮೇಕಪ್ ಮಾಡಿಸಿಕೊಂಡಿದ್ದ ಯುವತಿಗೆ ಈ ದುರ್ಗತಿ ಎದುರಾಗಿದೆ. ಬ್ಯೂಟಿಪಾರ್ಲರ್‌ನ (Beauty Parlour ಮಾಲೀಕರಾದ ಗಂಗಾ, ಹೊಸ ಬಗೆಯ ಮೇಕಪ್ ಮಾಡುವುದಾಗಿ ಹೇಳಿ ಸ್ಟೀಮ್ ನೀಡಿದ್ದಾರೆ. ಇದಾದ ಬಳಿಕ ವಧುವಿನ ಮುಖ ಊದಿಕೊಂಡು, ಸುಟ್ಟಂತೆ ಕಪ್ಪಾಗಿದೆ.

HSN MAKEUP 4

ವಿರೂಪಗೊಂಡ ಯುವತಿಯ ಮುಖ ನೋಡಿ ಮದುವೆಯಾಗಲು ವರ ಹಾಗೂ ವರನ ಕುಟುಂಬ ನಿರಾಕರಿಸಿದೆ. ಕಳೆದ ಹತ್ತು ದಿನಗಳ ಹಿಂದೆ ನಡೆದಿದ್ದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅವಘಡದ ಕುರಿತು ಅರಸೀಕೆರೆ ನಗರ ಪೊಲೀಸರು ಬ್ಯೂಟಿಪಾರ್ಲರ್ ಮಾಲಕಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: Exclusive Details- ಇಂದು ಯುವರಾಜ ಹೊಸ ಚಿತ್ರದ ಟೈಟಲ್, ಟೀಸರ್ ಅನಾವರಣ

Share This Article
Leave a Comment

Leave a Reply

Your email address will not be published. Required fields are marked *